ಯಾರು ಅರಿಯರೊ ನಮ್ಮೂರು

ಯಾರು ಅರಿಯರೊ ನಮ್ಮೂರು

( ರಾಗ ಕಾಂಭೋಜ. ಆದಿ ತಾಳ) ಯಾರು ಅರಿಯರೊ ನಮ್ಮೂರು ಹರಿದಾಸರಿಗೊಲಿದರೆ ನಮ್ಮೂರು || ಅಂಡದ ತುದಿಯಲಿ ನಮ್ಮೂರು, ಅದು ಕಂಡವರಿಲ್ಲವೊ ನಮ್ಮೂರು ದಂಡೆ ಕಾಣದು ನಮ್ಮೂರು, ನಡು ಮಂಡೆಸ್ಥಳವೆ ನಮ್ಮೂರು || ಬೈಲಿಗೆ ಬೈಲೇ ನಮ್ಮೂರು, ಅದು ಬೈಲೇ ಬ್ರಹ್ಮನೆ ನಮ್ಮೂರು ಭವಭಯಹರನಾಳ್ವುದೆ ನಮ್ಮೂರು, ಅದು ಭವಭಯಹರವೇ ನಮ್ಮೂರು || ಪರಸ್ಪರವೇ ನಮ್ಮೂರು, ಅದೇ ಪರದೇಶಿಗಳಿರುವೋದೆ ನಮ್ಮೂರು ಪೂರ್ಣಾನಂದವೆ ನಮ್ಮೂರು ಪುರಂದರವಿಠಲನೆ ನಮ್ಮೂರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು