ರಾಘವೇಂದ್ರ ಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋ

ರಾಘವೇಂದ್ರ ಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋ

ರಾಗ - ಶಂಕರಾಭರಣ : ತಾಳ - ಆದಿತಾಳ ರಾಘವೇಂದ್ರ ಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋ | ಮಾಘದರಿಪು ಮತ ಸಾಗರ ಮೀನ ಮಹಾಘ ವಿನಾಶನ ನಮೋ ನಮೋ | ಶ್ಲಾಘಿತ ಗುಣಗಣ ಸೂರಿ ಪ್ರಸಂಗ ಸದಾಗಮಜ್ಞ ತೇ ನಮೋ ನಮೋ | ಮೇಘಶ್ಯಾಮಲ ರಾಮಾರಾಧಕ ಅಮೋಘ ಬೋಧತೇ ನಮೋ ನಮೋ | ೧ | ತುಂಗಭದ್ರ ಸುತರಂಗಿಣಿ ತೀರಗ ಮಂಗಳ ಚರಿತ ಶುಭಾಂಗ ನಮೋ | ಇಂಗಿತಜ್ಞ ಕಾಳಿಂಗ ಮಥನ ಯದುಪುಂಗವ ಹೃದಯ ಸುಸಂಗ ನಮೋ | ಸಂಗಿರ ಚಿನ್ಹಿತ ಶೃಂಗಾರಾನನ ತಿಂಗಳ ಕರುಣಾಪಾಂಗ ನಮೋ | ಗಾಂಗೇಯ ಸಮಭಾಂಗ ಕುಮತ ಮಾತಂಗ ಸಂಘ ಶಿತಪಿಂಗ ನಮೋ | ೨ | ಶ್ರೀಸುಧೀಂದ್ರಕರಜಾತ ನಮೋ ನಮೋ ಭೂಸುರ ವಿನುತ ವಿಖ್ಯಾತ ನಮೋ | ದೇಶಿಕವರ ಸಂಸೇವ್ಯ ನಮೋ ನಮೋ ದೋಷ ವಿವರ್ಜಿತ ಕಾವ್ಯ ನಮೋ ಕ್ಲೇಶಿತ ಜನ ಪಪಾಲ ನಮೋ ನಮೋ ಭಾಸಿತ ಕರುಣಾಶೀಲ ನಮೋ | ವ್ಯಾಸ ರಾಮಪದ ಭಕ್ತ ನಮೋ ನಮೋ ಶಾಶ್ವತ ಧರ್ಮಾಸಕ್ತ ನಮೋ ನಮೋ| ೩ | ಕೋವಿದ ಮಸ್ತಕ ಶೋಭಿತಮಣಿ ಸಂಭಾವಿತ ಸುಮಹಿಮ ಪಾಲಯ ಮಾಂ | ಸೇವಾಪರ ಸರ್ವಾರ್ಥಪ್ರದ ವೃಂದಾವನ ಮಂದಿರ ಪಾಲಯ ಮಾಂ | ಭಾವಜ ಮಾರ್ಗಣ ಭುಜಗವಿನಾಯಕಭಾವಜ್ಞ ಪ್ರಿಯ ಪಾಲಯ ಮಾಂ | ಕೇವಲ ನತಜನ ಪಾವನರೂಪಿ ಸದಾ ವಿನೋದಿ ಹೇ ಪಾಲಯ ಮಾಂ | ೪ | ಸನ್ನುತ ಮಹಿಮ ಜಗನ್ನಾಥವಿಟ್ಠಲ ಸನ್ನಿಹಿತ ಮಾನಸ ಜಯಜಯ ಭೋ | ಚಿನ್ಹಿತ ಪುಂಡ್ರ ಕಮಂಡಲ ದಂಡ ಪ್ರಪನ್ನ ಭಯಾಪಹ ಜಯಜಯ ಭೋ | ಮಾನ್ಯ ಮಹಾತ್ಮ ಪ್ರಸನ್ನವದನ ಕಾರುಣ್ಯ ಪಯೋನಿಧೆ ಜಯಜಯ ಭೋ | ಧನ್ಯ ಕ್ಷಮಾ ಸಂಪನ್ನ ಧರಾಮರ ಶರಣ್ಯ ಶಾಶ್ವತ ಜಯಜಯ ಭೋ | ೫ |
ದಾಸ ಸಾಹಿತ್ಯ ಪ್ರಕಾರ
ಬರೆದವರು