ನೆರೆ ನಂಬಿದೆ ಮದ್‍ಹೃದಯಮಂಟಪದೊಳು

ನೆರೆ ನಂಬಿದೆ ಮದ್‍ಹೃದಯಮಂಟಪದೊಳು

ನೆರೆ ನಂಬಿದೆ ಮದ್‍ಹೃದಯಮಂಟಪದೊಳು | ಪರಿಶೋಭಿಸುತಿರು ಪಾಂಡುರಂಗ |ಪ| ಶರಣಜನರ ಸಂಸಾರಮಹಾಭಯ | ಹರಣ ಕರುಣ ಸಿರಿ ಪಾಂಡುರಂಗ | ಅ ಪ | ನೆರೆದಿಹ ಬಹು ಜನರೊಳಿದ್ದರು ಮನ | ಸ್ಥಿರವಿಡು ನಿನ್ನಲಿ ಪಾಂಡುರಂಗ | ಪರಿಪರಿ ಕೆಲಸವು ನಿನ್ನ ಮಹಾಪೂಜೆ | ನಿರುತ ಎನಗೆ ಕೊಡು ಪಾಂಡುರಂಗ | ೧ | ಪರದೇವನೆ ನಿನ್ನ ಲೀಲಾಸ್ಮೃತಿಯನು | ನಿರುತ ಎನಗೆ ಕೊಡು ಪಾಂಡುರಂಗ | ಪರರಾಪೇಕ್ಷೆಯ ಬಿಡಿಸಿ ನಿರಂತರ | ಪರಗತಿ ಪಥ ತೋರೋ ಪಾಂಡುರಂಗ | ೨ | ಸುಖವಾಗಲಿ ಬಹು ದುಃಖವಾಗಲಿ | ಸಖ ನೀನಾಗಿರು ಪಾಂಡುರಂಗ | ನಿಖಿಲಾಂತರ್ಗತ ವ್ಯಾಸವಿಠಲ ತವ | ಮುಖಪಂಕಜ ತೋರೋ ಪಾಂಡುರಂಗ | ೩ |
ದಾಸ ಸಾಹಿತ್ಯ ಪ್ರಕಾರ
ಬರೆದವರು