ದಾಸರೆಂದರೆ ಪುರಂದರದಾಸರಯ್ಯ
ದಾಸರೆಂದರೆ ಪುರಂದರ ದಾಸರಯ್ಯ!
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ ||ದಾಸರೆಂದರೆ||
ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು
ದಾಸನೆಂದು ತುಳಸೀಮಾಲೆ ಧರಿಸಿ
ಬೇಸರಿಲ್ಲದೆ ಅವರ ಕಾಡಿಬೇಡಿ ಬಳಲಿಸುತ
ಕಾಸು ಗಳಿಸುವ ಪುರುಷ ಹರಿದಾಸನೇ? ||ದಾಸರೆಂದರೆ||
ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನ
ಪ್ರೀಯದಲಿ ತಾನುಂಡು ಕೊಡದ ಲೋಭಿ
ಮಾಯ ಸಂಸಾರದಲ್ಲಿ ಮಮತೆ ಹೆಚ್ಚಾಗಿಟ್ಟು
ಗಾಯನವ ಮಾಡಲವ ಹರಿದಾಸನೇ? || ದಾಸರೆಂದರೆ||
ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ
ವಾತಸುತನಲ್ಲಿಹನ ವರ್ಣಿಸುತಲಿ
ಗೀತ ನರ್ತನದಿಂದ ಕೃಷ್ಣನ ಪೂಜಿಸುವ
ಪೂತಾತ್ಮ ಪುರಂದರ ದಾಸರಿವರಯ್ಯ ||ದಾಸರೆಂದರೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments
Re: ದಾಸರೆಂದರೆ ಪುರಂದರದಾಸರಯ್ಯ
In reply to Re: ದಾಸರೆಂದರೆ ಪುರಂದರದಾಸರಯ್ಯ by Vyasraj
Re: ದಾಸರೆಂದರೆ ಪುರಂದರದಾಸರಯ್ಯ
In reply to Re: ದಾಸರೆಂದರೆ ಪುರಂದರದಾಸರಯ್ಯ by hamsanandi
Re: ದಾಸರೆಂದರೆ ಪುರಂದರದಾಸರಯ್ಯ
ಮತ್ತೊಂದು...