ತೂಗಿರೆ ರಂಗನ ತೂಗಿರೆ ಕೃಷ್ಣನ

ತೂಗಿರೆ ರಂಗನ ತೂಗಿರೆ ಕೃಷ್ಣನ

ಶಂಕರಾಭರಣ ರಾಗ/ಛಾಪುತಾಳ. ||ತೂಗಿರೆ ರಂಗನ ತೂಗಿರೆ ಕೃಷ್ಣನ||ಪ|| ||ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ| ||ತೂಗಿರೆ ಕಾವೇರಿ ರಂಗಯ್ಯನ||ಅ.ಪ|| ||ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ| ||ನಾಗಕನ್ನಿಕೆಯರು ತೂಗಿರೆ|| ||ನಾಗವೇಣಿಯರು ನೇಣು ಪಿಡಿದುಕೊಂಡು| ||ಬೇಗನೆ ತೊಟ್ಟಿಲ ತೂಗಿರೆ||೧|| ||ಇಂದ್ರ ಲೋಕದಲ್ಲುಪೇಂದ್ರ ಮಲಗ್ಯಾನೆ| ||ಇಂದು ಮುಖಿಯರೆಲ್ಲ ತೂಗಿರೆ|| ||ಇಂದ್ರ ಕನ್ನಿಕೆಯರು ಬಂದು ಮು| ||ಕುಂದನ ತೊಟ್ಟಿಲ ತೂಗಿರೆ||೨|| ||ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ| ||ನೀಲ ಕುಂತಳೆಯರು ತೂಗಿರೆ|| ||ವ್ಯಾಳ ಶಯನ ಹರಿ ಮಲಗು ಮಲಗು ಎಂದು| ||ಬಾಲ ಕೃಷ್ಣಯ್ಯನ ತೂಗಿರೆ||೩|| ||ಸಾಸಿರ ನಾಮದ ಸರ್ವೋತ್ತಮನೆಂದು| ||ಸೂಸುತ್ತ ತೊಟ್ಟಿಲ ತೂಗಿರೆ|| ||ಲೇಸಾಗಿ ಮಡುವಿನೊಳು ಶೇಷನ ತುಳಿದಿಟ್ಟ| ||ದೋಷ ವಿದೂರನ ತೂಗಿರೆ||೪|| ||ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ| ||ತರಳನ ತೊಟ್ಟಿಲ ತೂಗಿರೆ|| ||ಸಿರಿದೇವಿ ರಮಣನ ಪುರಂದರ ವಿಠಲನೆ| ||ಕರುಣದಿ ಮಲಗೆಂದು ತೂಗಿರೆ||೫|| ನೇಣು: ಹಗ್ಗ. ವ್ಯಾಳ: ಹಾವು, ಸರ್ಪ.
ದಾಸ ಸಾಹಿತ್ಯ ಪ್ರಕಾರ
ಬರೆದವರು