ಗಿಳಿಯು ಪಂಜರದೊಳಿಲ್ಲಾ
ಆನಂದಭೈರವಿ ರಾಗ/ಅಟ್ಟತಾಳ
||ಗಿಳಿಯು ಪಂಜರದೊಳಿಲ್ಲಾ|| ಪ||
||ಶ್ರೀ ರಾಮ ರಾಮಾ ಬರಿದು ಪಂಜರವಾಯಿತಲ್ಲಾ|| ಅ ಪ||
||ಅಕ್ಕ ನಿನ್ನ ಮಾತು ಕೇಳಿ ಚಿಕ್ಕದೊಂದು ಗಿಳಿಯ ತಂದು ಸಾಕಿದೆ||
||ಅಕ್ಕ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ|| ೧||
||ಅರ್ತಿಗೊಂದು ಗಿಳಿಯ ಸಾಕಿದ ಮುತ್ತಿನಹಾರವ ಹಾಕಿದೆ||
||ಮುತ್ತುಗೊಂಡು ಗಿಳಿಯು ತಾನು ಎತ್ತ ಓಡಿ ಹೋಯಿತಯ್ಯೋ|| ೨||
||ಹಸಿರು ಬಣ್ಣದ ಗಿಳಿಯು ಕುಶಲ ಬುದ್ಧಿಯ ಗಿಳಿಯು||
||ಅಸುವ ಕುಂದಿ ಗಿಳಿಯು ತಾನು ಹಸನಗೆಡಿಸಿ ಹೋಯಿತಯ್ಯೋ|| ೩||
||ಮುಪ್ಪಾಗದ ಬೆಣ್ಣೆಯನು ತಪ್ಪದೇ ನಾ ಹಾಕಿದೆ ಸಾಕಿದೆ||
||ಒಪ್ಪದಿಂದ ಗಿಳಿಯು ಈಗ ತೆಪ್ಪನೇ ಹಾರಿ ಹೋಯಿತಯ್ಯೋ|| ೪||
||ರಾಮ ರಾಮ ಎಂಬೋ ಗಿಳಿ ಕೋಮಲ ಕಾಯದ ಗಿಳಿ||
||ಸಾಮಜ ಪೋಷಕ ತಾನು ಪ್ರೇಮದಿ ಸಾಕಿದ ಗಿಳಿ|| ೫||
||ಒಂಬತ್ತು ಬಾಗಿಲ ಮನೆ ತುಂಬುವ ಸಂದಣಿಯಿರಲು||
||ಕುಂಭ ಮುರಿದು ಡಿಂಭ ಬಿದ್ದು ಅಂಬರಕೆ ಹಾರಿತಯ್ಯೋ|| ೬||
||ಅಂಗೈಯಲಾಡುವ ಗಿಳಿ ಮುಂಗೈಯ ಮೇಲಣ ಗಿಳಿ||
||ರಂಗ ಪುರಂದರವಿಠಲನಂತ ರಂಗದಿ ಭಜಿಸುವ ಗಿಳಿ|| ೭||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments
Re: ಗಿಳಿಯು ಪಂಜರದೊಳಿಲ್ಲಾ
In reply to Re: ಗಿಳಿಯು ಪಂಜರದೊಳಿಲ್ಲಾ by anil.ramesh
Re: ಗಿಳಿಯು ಪಂಜರದೊಳಿಲ್ಲಾ