ಪುರಂದರದಾಸ

Compositions of Purandara dasa

ಸೂಸಲಾಸೆಗೆ ಪೋಗಿ

ಸೂಸಲಾಸೆಗೆ ಪೋಗಿ ಬಡಿಗಲ್ಲಿನೊಳು ಸಿಕ್ಕಿದ ಮೂಷಕನ ತೆರನಾದೆನೊ ಎಲೊ ದೇವ ಹೇಸಿಕೆ ವಿಷಯಂಗಳಿಗೆ ಎರಗುತಿದೆ ಎನ್ನ ಮನ ಘಾಸಿಯಾದೆನೊ ಹೃಷಿಕೇಶ ನೀ ಸಲಹಯ್ಯ ವಾಸವಾರ್ಚಿತ ಗುರು ಪುರಂದರವಿಠಲ ನಿನ್ನ ದಾಸರ ಸಂಗದೊಳು ಇರಿಸೆನ್ನ ಅನವರತ ಕ್ಲೇಶ ಕಳೆಯಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಕಲ ಶ್ರುತಿಪುರಾಣಗಳೆಲ್ಲ

ಸಕಲ ಶ್ರುತಿಪುರಾಣಗಳೆಲ್ಲ ದಾವನ ಮಹಿಮೆ ಸುಖಪೂರ್ಣ ಸುರವರಾರ್ಚಿತ ಪಾದ ಶಕಟಮರ್ದನ ಶಾರದೇಂದುವಕ್ತ್ರ ರುಚಿಕರ ವರಕಲ್ಯಾಣರಂಗ ರುಕ್ಮಿಣೀರಮಣ ಪರಿಪೂರ್ಣ ನಮ್ಮ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರ್ಕಟನ ಕೈನೂಲು

ಮರ್ಕಟನ ಕೈನೂಲು ಗುಕ್ಕರಿಯ ತೆರನಂತೆ ಸಿಕ್ಕಿಕೊಂಡು ಕಾಮಕ್ರೋಧಾದಿಗಳೆನ್ನ ಹಿಕ್ಕಿ ಹೀರುತಲಿವೆ ಏಕೆ ನೋಡುತಲಿದ್ಯೊ ಅಕ್ಕಟಕಟ ನಿನ್ನ ದಾಸನಲ್ಲವೆ ನಾನು ಸಿಕ್ಕು ಬಿಡಿಸಿ ನಿನ್ನ ಭಕುತಿಯ ತೋರಿಸೋ ಪಕ್ಕದೊಳಗಿಟ್ಟು ಸಲಹೊ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದೇ ಒಂದು ಬೆರಳ ಜಪ

ಒಂದೇ ಒಂದು ಬೆರಳ ಜಪ ಒಂದೇ ಅಯಿದು ಗೆರೆಯ ಜಪ ಒಂದೇ ಹತ್ತು ಪುತ್ರ ಜೀವಿಮಣಿಯ ಜಪ ಒಂದೇ ನೂರು ಶಂಖದ ಮಣಿಯ ಜಪ ಒಂದೇ ಸಾವಿರ ಹವಳದ ಜಪ ಒಂದೇ ಹತ್ತು ಸಾವಿರ ಮುತ್ತಿನ ಮಣಿಯ ಜಪ ಒಂದೇ ಲಕ್ಷ ಸುವರ್ಣಮಣಿಯ ಜಪ ಒಂದೇ ಕೋಟಿ ದರ್ಭೆಗಂಟಿನ ಜಪ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎರಡು ಘಳಿಗೆ ಬೆಳಗು ಇರಲು

ಎರಡು ಘಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ ಕರವ ಮುಗಿದು ಮಾಡೊ ಸಂಕಲ್ಪ ವೇದ ಪರಮಪುಣ್ಯಾತ್ಮ ಬ್ರಾಹ್ಮಣಧರ್ಮವೆಂದು ಪುರಂದರವಿಠಲ ಮೆಚ್ಚಿ ಪಾಲಿಸುವ | ಮಲ ಮೂತ್ರ ಮಾಡುವಾಗ ಕರದಲ್ಲಿ ಜಲವಿರೆ ಮಲಕೆ ಸಮಾನ ಅದು ಶುದ್ಧವಲ್ಲ ವಿಲಸಿತ ಕರ್ಮವಾಚರಿಸಿ ಹರಿಯ ನೆನೆಯು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುರುಕರುಣ ಹೊಂದುವುದು

ಗುರುಕರುಣ ಹೊಂದುವುದು ಪರಮದುರ್ಲಭವಯ್ಯ ಪರಿಪರಿ ವ್ರತಗಳ ಚರಿಸಲು ಫಲವೇನು ಶರೀರಾದಿ ಪುತ್ರ ಮಿತ್ರ ಕಳತ್ರ ಬಾಂಧವರು ಇರಿಸೋರೆ ಸದ್ಗತಿಗೆ ಸಾಧನದಿ ನಿರತವು ಗುರುಪಾದ ನಿಜವಾಗಿ ಮನದಲ್ಲರಿತು ಭಜಿಸಲು ಅಖಿಳಸಂಪದವಕ್ಕು ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೆನಕನನೊಲ್ಲೆನವ್ವ

ಬೆನಕನನೊಲ್ಲೆನವ್ವ , ತುಲಕಿ ಆಡುವನ ಷಣ್ಮುಖನನೊಲ್ಲೆನವ್ವ, ಬಹುಬಾಯಿಯವನ ಇಂದ್ರನನೊಲ್ಲೆನವ್ವ , ಮೈಯೆಲ್ಲ ಕಣ್ಣನವ್ವ ಚಂದ್ರನನೊಲ್ಲೆನವ್ವ , ಕಳೆಗುಂದುವವನ ರವಿಯನೊಲ್ಲೆನವ್ವ , ಉರಿದು ಮೂಡುವನ ಹರನನೊಲ್ಲೆನವ್ವ , ಮರುಳುಗೊಂಬುವನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಾ ಒಂದೇ ಎಂಬುವರ

ಎಲ್ಲಾ ಒಂದೇ ಎಂಬುವರ ಎರಡು ದಾಡಿ ಸೀಳಿ ಹಲ್ಲುದುರಕುಟ್ಟಬೇಕು ಹರಿಭಕ್ತರಾದವರು ಸಲ್ಲದು ಸಲ್ಲದು ಈ ಮಾತು , ಸಂಶಯ ಬೇಡಿರೋ ಕಲ್ಲ ನಾರಿಯ ಮಾಡಿದ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉದಯಕಾಲದ ಜಪ

ಉದಯಕಾಲದ ಜಪ ನಾಭಿಗೆ ಸರಿಯಾಗಿ ಹೃದಯಕ್ಕೆ ಸರಿಯಾಗಿ ಮಧ್ಯಾಹ್ನದಿ ವದನಕ್ಕೆ ಸಮನಾಗಿ ಸಾಯಂಕಾಲಕೆ ನಿತ್ಯ ಪದುಮನಾಭ ತಂದೆ ಪುರಂದರವಿಠಲಗೆ ಇದೇ ಗಾಯತ್ರಿಯಿಂದ ಜಪಿಸಬೇಕೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನಮ್ಮ ಸಿರಿದೇವಿ

ಎನ್ನಮ್ಮ ಸಿರಿದೇವಿ ಇನ್ನು ಅರಿಯಳು ಮಹಿಮೆ ಕುನ್ನಿ ಮಾನವನು ನಾನೇನು ಬಲ್ಲೇನು ಪನ್ನಗಾದ್ರಿನಿಲಯನೆ ಪಾವನಮೂರ್ತಿ ಕೃಷ್ಣ ಎನ್ನನುದ್ಧರಿಸಯ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು