ಪುರಂದರದಾಸ

Compositions of Purandara dasa

ಜಗದಂತರ್ಯಾಮಿ ನೀನು, ನಿನ್ನ ಬಿಟ್ಟು

ಜಗದಂತರ್ಯಾಮಿ ನೀನು, ನಿನ್ನ ಬಿಟ್ಟು ಬಯಲೆಂದು ಬಗೆವನೆ ಬ್ರಹ್ಮಹತ್ಯಗಾರ ಅಗಣಿತಗುಣ ನೀನು, ನಿನ್ನ ಗುಣಗಳಿಂತೆಂದು ಬಗೆವನೆ ಜಗದೊಳಗೆ ಸ್ವರ್ಣಸ್ತೇಯಿ ನೀ ಸೇವ್ಯ ಜಗದೊಡೆಯ ನೀನಿರಲು ಅನ್ಯದೇವರೊಡೆಯನೆಂದು ಬಗೆವನೆ ಜಗದೊಳಗೆ ಮದ್ಯಪಾನಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಸರ್ವೋತ್ತಮನೆಂಬೊ ಹಿರಿಪುತ್ರನಿರಲಾಗಿ

ಹರಿಸರ್ವೋತ್ತಮನೆಂಬೊ ಹಿರಿಪುತ್ರನಿರಲಾಗಿ ಈ ನರಪುತ್ರರಿಂದ ಆಹೋದೇನಯ್ಯ ಪದ್ಮನಾಭನೆಂಬೊ ದೊಡ್ಡ ಪುತ್ರನಿರಲಾಗಿ ಈ ದಡ್ಡಪುತ್ರನಿಂದಲಿ ಆಗೊ ಗತಿಯೇನಯ್ಯ ಶ್ರೀಕೇಶವನೆಂಬೊ ಜ್ಯೇಷ್ಠಪುತ್ರನಿರಲಾಗಿ ಈ ನಷ್ಟಪುತ್ರರಿಂದಲಾಗೋ ಗತಿಯೇನಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತುಲಸಿಯಿರಲು ತುರುಚಿಯನು ತರುವಿರೊ

ತುಲಸಿಯಿರಲು ತುರುಚಿಯನು ತರುವಿರೊ ಗಂಗೆಯಿರಲು ತೋಡಿದ ಕೂಪದಿ ಪಾನವ ಮಾಡಿದೆ ರಾಜಹಂಸವಿರಲು ಕೋಯೆಂದು ಕೂಗುವ ಕೋಳಿಗೆ ಹಾಲೆರೆದೆ ಬಾವನವಿರಲು ಬೇಲಿನ ನೆಳಲೊರಗಿದೆ ತಾಯಿ ಮಾರಿ ತೊತ್ತ ತರುವ ಮಾನವನಂತೆ ಪುರಂದರವಿಠಲ ನೀನಿರಲನ್ಯತ್ರ ದೈವಂಗಳ ಎಣಿಸಿದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹುಟ್ಟುವ ಭೀತಿ ಹೊಂದುವ ಭೀತಿ

ಹುಟ್ಟುವ ಭೀತಿ ಹೊಂದುವ ಭೀತಿ ವಿಟ್ಠಲನಂಘ್ರಿಯ ನೆನೆಯದವರಿಗೆ ಕಾಲನ ಭೀತಿ ಕರ್ಮದ ಭೀತಿ ಗೋ- ಪಾಲನ ದಾಸನಾಗದವನಿಗೆ | ಅರಿಷಡ್ವರ್ಗದ ಮಹಾಭೀತಿ ಶ್ರೀ- ಹರಿನಾಮನುಚ್ಛರಿಸದವಗೆ ಹಲವು ಮಾತಿನ್ನೇನು ಹಲವು ಭೀತಿ ಚೆಲುವ ಪುರಂದರವಿಟ್ಠಲನ್ನ ಪೂಜಿಸದವಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಭಕ್ತರೆಂದೆನಿಸಿದ ಜನರು

ನಿನ್ನ ಭಕ್ತರೆಂದೆನಿಸಿದ ಜನರು ಭಂಗಪಡಲುಬೇಕು ದಿನಪ್ರತಿದಿನ ಅನ್ನ ಉದಕ ವಸ್ತ್ರಗಳು ಕಾಣದೆ ಇರಬೇಕು ಬೆನ್ನ್ಹತ್ತಿ ರೋಗಗಳು ಹತ್ತಿ ಇರಲುಬೇಕು ತನ್ನವರ ಕೈಯಿಂದ ಛೀಯೆನಿಸಿಕೊಳಬೇಕು ಪನ್ನಗಶಯನ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಕಾಲ್ಹೆಜ್ಜೆಯ ಪಿಡಿದು ನಾ ನಿಲ್ಲುವೆ

ನಿನ್ನ ಕಾಲ್ಹೆಜ್ಜೆಯ ಪಿಡಿದು ನಾ ನಿಲ್ಲುವೆ ನಿನ್ನ ಪಂಜು ಹಿಡಿದು ಒಡ್ಡಿ ಬೊಬ್ಬಿಡುವೆ ನಿನ್ನ ಛತ್ರಚಾಮರ ಪಿಡಿದೇಳುವೆ ನೀರು ನಿವಾಳಿಸಿಕೊಂಡು ಕೊಬ್ಬುವೆನು ಬಿಡೆನು ಬಿಡೆನು ನಿನ್ನ ಚರಣಕಮಲವ ಪುರಂದರವಿಠಲ ನಿನ್ನ ಪಾದವ ಬಿಡೆನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಟ್ಟಬೇಡ ಅಚ್ಯುತಗರ್ಪಿತವಲ್ಲದನ್ನ

ಮುಟ್ಟಬೇಡ ಅಚ್ಯುತಗರ್ಪಿತವಲ್ಲದನ್ನ ಕಂ- ಗೆಟ್ಟು ತುತಿಸಬೇಡ ಹರಿಯಲ್ಲದನ್ಯತ್ರ ಕಷ್ಟ ಬೇಡ ಭೂಸುರರಲ್ಲಿ ದುಷ್ಟಜನರ ಸಂಗ ಬೇಡ ಶ್ರೀ ಪುರಂದರವಿಠಲನಂಘ್ರಿಯ ನೆನೆಯುತಲಿರು ಕಷ್ಟ ಬೇಡ ಭೂಸುರರಲ್ಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪಾಯ ಕೋಟಿಕೋಟಿಗಳಿಗೆ

ಅಪಾಯ ಕೋಟಿಕೋಟಿಗಳಿಗೆ ಉಪಾಯ ಒಂದೆ ಹರಿಭಕ್ತರ ತೋರಿಕೊಟ್ಟು ಉಪಾಯ ಒಂದೆ ಪುರಂದರವಿಠಲನೆಂದು ಬೋವಿಟ್ಟು ಕರೆವ ಉಪಾಯ ಒಂದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆದಿಸೃಷ್ಟಿಯಲಾರು ಮೊದಲೆ ಉದಿಸಿದರೇನು

ಆದಿಸೃಷ್ಟಿಯಲಾರು ಮೊದಲೆ ಉದಿಸಿದರೇನು , ಅವರವರೆ ಅಧಿಕರಧಿಕರಯ್ಯ ಕಾಲಾಜಯಾದಿಗಳು ಮೊದಲೆ ಉದಿಸಿದರೇನು , ಅವರವರೆ ಅಧಿಕರಧಿಕರಯ್ಯ ಅವರಂತರಂತರ ಅವರ ನೋಡಯ್ಯ , ಅವರವರೆ ಅಧಿಕರಧಿಕರಯ್ಯ ಪುರಂದರವಿಠಲನ ಸಂತತಿ ನೋಡಯ್ಯ , ಅವರವರೆ ಅಧಿಕರಧಿಕರಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಗುರುಗಳಿಗೆರಗದೆ

ಹರಿಗುರುಗಳಿಗೆರಗದೆ ಹರಿಭಕ್ತಿ ಎರಗದೆ ಕೆರವ ತಿಂಬೊ ನಾಯಿಗೆ ತುಪ್ಪವಾಗ ಸೊಗಸುವುದೆ ಹರಿನಾಮಕ್ಕೆ ಹರಿದಾಸರು ಕರಗುವರಲ್ಲದೆ ನರಕಭಾಜನನಿಗು ಪಾಮರರು ಕರಗುವರೆ ಚಂದ್ರಕಿರಣಕೆ ಚಂದ್ರಕಾಂತಿ ಒಸರುವುದಲ್ಲದೆ ಗೋರಿಕಲ್ಲು ಒಸರುವುದೆ ಸಿರಿಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು