ಪುರಂದರದಾಸ

Compositions of Purandara dasa

ಸುಮ್ಮನೆ ಬಾಹೋದೆ ಮುಕ್ತಿ

-- ರಾಗ ಧನ್ಯಾಸಿ ಅಷ್ಟತಾಳ ಸುಮ್ಮನೆ ಬಾಹೋದೆ ಮುಕ್ತಿ ||ಪ|| ಮನದಲ್ಲಿ ದೃಢವಿರಬೇಕು , ಕೋಪ ಮನದ ಸಂಸಾರವ ನೀಡಾಡಬೇಕು ಅನುಮಾನವನು ಬಿಡಬೇಕು, ತನ್ನ ತನುವನ್ನು ಧರ್ಮಕೊಪ್ಪಿಸಿ ಕೊಡಬೇಕು ||೧|| ಪಾಪಿ ಕೋಪವ ಬಿಡಬೇಕು , ಅಲ್ಲಿ ಗೋಪಾಲ ಕೃಷ್ಣನ್ನ ಪೂಜಿಸಬೇಕು ತಾಪರಹಿತನಾಗಬೇಕು ತನ್ನ ಪಾಪವನು ಕಳೆವ ಗುರುವ ನಂಬಬೇಕು ||೨|| ಶರೀರದಾಸೆಯ ಬಿಡಬೇಕು ತನ್ನ ಶರೀರ ಅನಿತ್ಯ ಎನಲುಬೇಕು ಪರದ ಇಷ್ಟಾರ್ಥಗಳು ಬೇಕು , ಹರಿ- ಪುರಂದರ ವಿಠ್ಠಲನ್ನ ನಂಬಲು ಬೇಕು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗನಾಯಕ ರಾಜೀವಲೋಚನ

ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನುತ |ಪ| ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ರೆ ಸಾಕೆನುತ |ಅ ಪ| ಪಕ್ಷಿ ರಾಜನು ಬಂದು ಬಾಗಿಲಲ್ಲಿ ನಿಂದು ಅಕ್ಷಿತೆರೆದು ಬೇಗ ಈಕ್ಷಿಸೆಂದು ಪಕ್ಷಿ ಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತಾ ಸೂಕ್ಷ್ಮದಲಿ ನಿನ್ನ ಸ್ಮರಿಸುವವೋ ಕೃಷ್ಣ|| ಸನಕ ಸನಂದನ ಸನತ್ಸುಜಾತರು ಬಂದು ವಿನಯದಿಂ ಕರಮುಗಿದು ಓಲೈಪರು ಘನ ಶುಕ ಶೌನಕ ವ್ಯಾಸ ವಾಲ್ಮೀಕರು ನೆನೆದು ನೆನೆದು ಕೊಂಡಾದುವರು ಹರಿಯೇ|| ಸುರರು ಕಿನ್ನರರು ಕಿಂಪುರುಷರು ಉರಗರು ಪರಿಪರಿಯಲಿ ನಿನ್ನ ಸ್ಮರಿಸುವರು ಅರುಣನು ಬಂದು ಉದಯಾಚಲದಿ ನಿಂದು ಕಿರಣದೋರುವನು ಭಾಸ್ಕರನು ಶ್ರೀ ಹರಿಯೆ|| ಪದುಮನಾಭನೆ ನಿನ್ನ ನಾಮಾಮೃತವನ್ನು ಪದುಮಾಕ್ಷಿಯರು ತಮ್ಮ ಗೃಹದೊಳಗೆ ಉದಯದೊಳೆದ್ದು ಸವಿದಾಡುತ್ತ ಪಾಡುತ್ತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಲಿಯ ಮನೆಗೆ ವಾಮನ ಬಂದಂತೆ

ಬಲಿಯ ಮನೆಗೆ ವಾಮನ ಬಂದಂತೆ ಭಗೀರಥಗೆ ಶ್ರೀಗಂಗೆ ಬಂದಂತೆ ಮುಚುಕುಂದಗೆ ಶ್ರೀ ಮುಕುಂದ ಬಂದಂತೆ ಗೋಪಿಯರಿಗೆ ಗೋವಿಂದ ಬಂದಂತೆ ವಿದುರನ ಮನೆಗೆ ಶ್ರೀ ಕೃಷ್ಣ ಬಂದಂತೆ ವಿಭೀಷಣನ ಮನೆಗೆ ಶ್ರೀ ರಾಮ ಬಂದಂತೆ ನಿನ್ನ ನಾಮವು ಬಂದು ಎನ್ನ ನಾಲಿಗೆಯಲಿ ನಿಂದು ಸಲಹಲಿ ಶ್ರೀ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ

ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ ||ಪ|| ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆ ||ಅ|| ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಾಣೆ ಘಳಿಲನೆ ಕೂರ್ಮ ತಾನಾಗಿ ಗಿರಿಯ ಪೊತ್ತ ದಾಸಯ್ಯ ಬಂದ ಕಾಣೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ ನಿನ್ನಂಥ ತಂದೆ ಎನಗುಂಟು ನಿನಗಿಲ್ಲ ನಾನೇ ಸ್ವದೇಶಿ ನೀನೇ ಪರದೇಶಿ ನಿನ್ನರಸಿ ಲಕುಮಿ ಎನ್ನ ತಾಯಿ ನಿನ್ನ ತಾಯ ತೋರೋ ಪುರಂದರ ವಿಠಲ!
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಣ್ಣು ಬಂದಿದೆ ಕೊಳ್ಳಿರೋ ನೀವೀಗ

ಹಣ್ಣು ಬಂದಿದೆ ಕೊಳ್ಳಿರೋ ನೀವೀಗ ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು || ಪ || ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು ಭವರೋಗಗಳನೆಲ್ಲ ಕಳೆವ ಹಣ್ಣು ನವನೀತ ಚೋರನೆಂಬ ಯಮನ ಅಂಜಿಪ ಹಣ್ಣು ಅವನಿಯೊಳ್ ಶ್ರೀರಾಮನೆಂಬೊ ಹಣ್ಣು || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಫಲಹಾರವನೆ ಮಾಡೋ

ಫಲಹಾರವನೆ ಮಾಡೋ ಪರಮಪುರುಷನೆ ಲಲನೆ ಲಕ್ಷ್ಮೀ ಸಹ ಸಕಲಸುರರೊಡೆಯ || ಕಬ್ಬು ಕದಳಿಫಲ ಕೊಬ್ಬರಿ ಖರ್ಜೂರ ಕೊಬ್ಬಿದ ದ್ರಾಕ್ಷಿ ಹಲಸು ತೆಂಗು ಶುಭ್ರ ಸಕ್ಕರೆ ಲಿಂಬೆ ಮಾವು ಕಿತ್ತಳೆಗಳು ಇಬ್ಬದಿಯಲಿ ಇಟ್ಟ ಶೇಷಫಲಂಗಳು || ನೆನೆಗಡಲೆ ಬೇಳೆ ಲಡಿಗೆ ಮೂಗದಾಳು*
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆ ರಣಾಗ್ರದಿ ಭೀಮಗಡ್ಡೈಪರಾರು

ಆ ರಣಾಗ್ರದಿ ಭೀಮಗಡ್ಡೈಪರಾರು ? ವಾರಿಧಿ ಮೇರೆದಪ್ಪಲು ನಿಲ್ಲಿಸುವರಾರು ? || ನಾನಾ ದೇಶದ ಭೂನಾಯಕರಿದ್ದರಲ್ಲವೆ ? ತಾನು ದುಶ್ಶಾಸನನು ತತ್ತರಿಸುವಾಗ ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆ ? ಆನೆಯ ಕೈಯ ಕಬ್ಬಿಗೆ ಅಂಗಯಿಸುವವರಾರು ? ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಳು ಕೋಪಿಸಬೇಡ ಹೇಳಲಿಕಂಜುವೆನು

ಕೇಳು ಕೋಪಿಸಬೇಡ, ಹೇಳಲಿಕಂಜುವೆನು ಬಾಳು ಬಡತನವ ನಾನು || ತಲೆಗೊಯ್ಕ ಹಿರಿಯ ಮಗ , ಇಳೆಗೆ ಪೂಜಿತನಲ್ಲ ಬಲು ಭಂಡ ನಿನ್ನಯ ಕಿರಿಯ ಮಗ, ಲಲನೆಯು ಸೇರಿದಳು , ಬಲು ಲೋಭಿಗಳ ಮನೆಯ ಹೊಲೆ ಕುಲವರಿಯಳು ನಿನ್ನ ಸೊಸೆಯು ರಂಗ || ಮಗಳ ಮಾರ್ಗವು ಡೊಂಕು , ಮೈದುನ ಗುರುದ್ರೋಹಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ಜೀವ ಈ ದೇಹ

ರಾಗ : ಕಲ್ಯಾಣವಸಂತ ಖಂಡಛಾಪುತಾಳ ಈ ಜೀವ ಈ ದೇಹ ಇದ್ದು ಫಲವೇನೋ ರಾಜೀವ ನೇತ್ರನಾ ನೋಡದ ಮೇಲೇ ರಂಗರಾಜನ ಪಾದ ಭೃಂಗನೆಂದೆನಿಸುವಾ ತುಂಗ ಪಾದವ ತೊಳೆದು ತೀರ್ಥವಾವಹಿಸಿ ಹಿಂಗದೆ ಪ್ರತಿದಿನ ಹಿರಣ್ಯಾರಿ ದೇವನ್ನ ಮಂಗಳಪ್ರದನಾದ ರಂಗನ ನೋಡದ ಮೇಲೇ ..||
ದಾಸ ಸಾಹಿತ್ಯ ಪ್ರಕಾರ
ಬರೆದವರು