ಪುರಂದರದಾಸ

Compositions of Purandara dasa

ಕಣ್ಣಿಲಿ ಕೇಳುವ ಕಾಂಬುದನರಿವ

ಕಣ್ಣಿಲಿ ಕೇಳುವ ಕಾಂಬುದನರಿವ ಆಘ್ರಾಣಿಸುವ ಆಸ್ವಾದಿಸುವ ರಸನದಿ ಕೇಳುವ ಕರ್ಮಲೋಪಕ ಲೋಕವಿಲಕ್ಷಣ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆವಿನ ಕೊಂಬಿನ ತುದಿಯಲ್ಲಿ

ಆವಿನ ಕೊಂಬಿನ ತುದಿಯಲ್ಲಿ ಸಾಸಿವೆ ನಿಂತಿದ್ದ ಕಾಲವೆ ನಿನ್ನ ನೆನೆದವ ಜೀವನ್ಮುಕ್ತನಲ್ಲವೆ ಸರ್ವಕಾಲದಲ್ಲಿ ಒರಲುತ್ತ ನರಲುತ್ತ ಹರಿಹರಿ ಎಂದವ ಜೀವನ್ಮುಕ್ತ ಎಂಬುದಕ್ಕೆ ಏನು ಆಶ್ಚರ್ಯವಯ್ಯ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಂಡುತನಯನಂತೆ ಕರೆದು

ಪಾಂಡುತನಯನಂತೆ ಕರೆದು ನಿನ್ನ ಅಟ್ಟುಮಾಣಿಗೆ ಮಣೆಯ ಹಾಕಿಕ್ಕಬೇಕು ಅರ್ಜುನನಂತೆ ನಿನ್ನ ಬಂಡಿಯ ಬೋವನ ಮಾಡಿ ಕುದುರೆಲಗಾಮು ಕೈಹಿಡಿಸಲಿಬೇಕು ಆಹಾ ಅನುದಿನ ಅರ್ಚಿಸಿ ಪೂಜಿಸಿ ಮೋಸ ಹೋದೆ ಸ್ವಾಮಿ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿತ್ಯ ಪತಿಭಾವ ಶ್ರೀಲಕುಮಿದೇವಿಗಯ್ಯ

ನಿತ್ಯ ಪತಿಭಾವ ಶ್ರೀಲಕುಮಿದೇವಿಗಯ್ಯ ನಿತ್ಯ ಪುತ್ರಭಾವ ಬೊಮ್ಮ ಪ್ರಾಣರಿಗೆ ನಿತ್ಯ ಪೌತ್ರಭಾವ ಗರುಡ ಶೇಷ ರುದ್ರರಿಗೆ ನಿತ್ಯ ಭೃತ್ಯಭಾವ ಇಂದ್ರ ಕಾಮ ಆತ್ಮ ಜೀವರಿಗೆ ಇಂತೆಂದ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸನಕಾದಿಗಳ ಹಂಸದಂತೆ

ಸನಕಾದಿಗಳ ಹಂಸದಂತೆ ಕಮಲದಲಿ ನಲಿವ ಮೂರುತಿಯನು ಮನುಜೋತ್ತಮರೆಂಬ ಮನ ಅಂಬರದೊಳು ಕಾಲಮಿಂಚಿನಂತೆ ಥಳಥಳಿಸುವ ಗುರುಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸತ್ಯಜನಾಭನೆ ಸತ್ಯಮಹಿಮನೆ

ಸತ್ಯಜನಾಭನೆ ಸತ್ಯಮಹಿಮನೆ ಸತ್ಯಕಾಮನೆ ಸತ್ಯಪೂರ್ಣನೆ ಸತ್ಯಭೂಷಣ ನಿತ್ಯ ಪುರಂದರವಿಠಲರೇಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ

ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ ಒಂದು ಕಾಲದಲ್ಲಿ ಮೃಷ್ಟಾನ್ನವುಣಿಸುವೆ ಒಂದು ಕಾಲದಲ್ಲಿ ಉಪವಾಸವಿರಿಸುವೆ ನಿನ್ನ ಮಹಿಮೆಯ ನೀನೆ ಬಲ್ಲೆಯೊ ದೇವ ಪನ್ನಂಗಶಯನ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು

ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು ಭಕುತಿಸಾಧನವಲ್ಲದನ್ಯ ಸಾಧನವುಂಟೆ ಭಕುತಿಗಭಿಮಾನಿ ಭಾರತಿಯ ಕರುಣದಿಂ ಮುಕುತಿಗೆ ಪಥವೆಂದು ಮನವಿಟ್ಟು ಭಜಿಸಿರೊ ಅಖಿಳೇಶ ಪುರಂದರವಿಠಲ ತಾನೊಲಿವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ

ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ ಅಚ್ಯುತನೆ ಕಾಯೊ , ಅನಂತನೆ ತೆಗೆಯೊ ಗೋವಿಂದ ಹರಿ ಪೊರೆಯೊ ಪುರಂದರವಿಠಲ ನೀ ಕರುಣವುಳ್ಳವನು ಕಾಣೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಿ ಹರಿಕಥೆಯ ಪ್ರಸಂಗ

ಎಲ್ಲಿ ಹರಿಕಥೆಯ ಪ್ರಸಂಗ ಅಲ್ಲಿ ಗಂಗೆ ಯಮುನೆ ಗೋದಾವರಿ ಸಿಂಧು ಎಲ್ಲ ತೀರ್ಥವು ಬಂದು ಎಣೆಯಾಗಿ ನಿಂದಿರಲು ವಲ್ಲಭ ಪುರಂದರವಿಠಲನೊಪ್ಪಿದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು