ಜಗನ್ನಾಥದಾಸ

ಮಂಗಳ ಗುರು ರಾಘವೇಂದ್ರಗೆ ಜಯ

( ರಾಗ - ನಾದನಾಮಕ್ರಿಯೆ ( ಭೈರವಿ) ಅಟತಾಳ(ಕಹರವಾ) ) ಮಂಗಳ ಗುರು ರಾಘವೇಂದ್ರಗೆ ಜಯ ||ಪ|| ಮಂಗಳ ಸುಜನಾಂಬುಧಿಚಂದ್ರಗೆ ||ಅ.ಪ|| ಶ್ರೀಸುಧೀಂದ್ರಕುಮಾರಗೆ ಮಂಗಳ ಭೂಸುರನುತ ಮಹಿಮಗೆ ಮಂಗಳ ದೇಶಿಕ ಕುಲವನಜಾರ್ಕಗೆ ಮಂಗಳ ಭಾಸುರ ಕೀರ್ತಿಯ ಪಡೆದವಗೆ ||೧|| ವೃಂದಾವನಭುವಿಯೊಳಗೆ ಸುರದ್ರುಮ- ದಂದದಿ ರಾಜಿಸುವಗೆ ಮಂಗಳ ಅಂಧ ಪಂಗು ಮೂಕ ಬಧಿರರ ಈಪ್ಸಿತ ಸಂದೋಹ ಸಲಿಸುವ ಮುನಿವರಗೆ ||೨|| ಭೂತಪ್ರೇತಬೇತಾಳ ಭಯವಿಪಿನ ವೀತಿಹೋತ್ರನೆನಿಪಗೆ ಮಂಗಳ ವಾತಜನುತ ಜಗನ್ನಾಥವಿಠಲನ ದೂತರ ಸಲಹುವ ದಾತನಿಗೆ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅತಿ ಶೋಭಿಸುತಿದೆ ಶ್ರೀಪತಿಯ ವಾಹನ

(ರಾಗ - ಕಾಂಬೋಧಿ (ಭೂಪ್) ಝಂಪೆತಾಳ) ಅತಿ ಶೋಭಿಸುತಿದೆ ಶ್ರೀಪತಿಯ ವಾಹನ ||ಪ|| ಚತುರ್ದಶಲೋಕದಲಿ ಅಪ್ರತಿವಾಹನ ||ಅ.ಪ|| ವಿನತೆ ಕಶ್ಯಪಮುನಿಗೆ ತನಯನೆನಿಸಿದ ವಾಹನ ಅನುಜರನು ಕದ್ದೊಯ್ದ ಆಢ್ಯವಾಹನ ವನದಿ ಮಧ್ಯದಿ ನಾವಿಕರ ಭಕ್ಷಿಸಿದ ವಾಹನ ಜನಕನಾಜ್ಞದಿ ಕೂರ್ಮಗಜರ ನುಂಗಿದ ವಾಹನ ||೧|| ಕುಲಿಶ ಪಾಣಿಯ ಕೂಡೆ ಕಲಹ ಮಾಡಿದ ವಾಹನ ಒಳಹೊಕ್ಕು ಪೀಯೂಷ ತಂದ ವಾಹನ ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ ಬಲಿರಾಯ ಒಯ್ದ ಮಕುಟವ ತಂದ ವಾಹನ ||೨|| ಕಾಲನಾಮಕನಾಗೆ ಕಮಲಭವನಲಿ ಜನಿಸಿ ಕಾಲಾತ್ಮ ಹರಿಯ ಸೇವಿಪವಾಹನ ಕಾಳಗದಿ ಕಪಿವರರ ಕಟ್ಟು ಬಿಡಿಸಿದ ವಾಹನ ಸೌಪರ್ಣಿಪತಿಯೆಂಬ ಹೊಂಬಣ್ಣವಾಹನ ||೪|| ಪನ್ನಗಾಶನ ವಾಹನ ಪತಿತಪಾವನ ವಾಹನ ಸನ್ನುತಿಪ ಭಕ್ತರನು ಸಲಹುವ ವಾಹನ ಪನ್ನಗಾದ್ರಿನಿವಾಸ ಜಗನ್ನಾಥವಿಠಲಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾರತೀ ಮಜ್ಜನನೀ

ರಾಗ-ಶಂಕರಾಭರಣ (ಭೈರವಿ) ಅಟತಾಳ (ದಾದರಾ) ಭಾರತೀ ಮಜ್ಜನನೀ ಭಾರತೀ- ||ಪ|| ಭಾರತೀ ಭರತನರ್ಧಾಂಗಿ ಕರು- ಣಾರಸಪೂರಿತ ಪಾಂಗಿ ಆಹಾ ತಾರ್ಕ್ಷ್ಯ ಪ್ರಮುಖ ವೈಕಾರಿಕ ದೇವ ಗ- ಣಾರಾಧಿತಾಂಘ್ರಿ ಸರೋರುಹೆ ಪಾಲಿಸು ||ಅ.ಪ|| ವಿದ್ಯುನ್ನಾಮಕೆ ವಿಧಿಜಾತೆ ಕೃತಿ ಪ್ರದ್ಯುಮ್ನ ಜಠರಸಂಭೂತೆ ಅನ- ವದ್ಯ ಸದ್ಗುಣ ಗಣವ್ರಾತೆ ಬ್ರಹ್ಮ- ವಿದ್ಯವ ಪಾಲಿಸು ಮಾತೆ ಆಹಾ ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ಪೆತ್ತ ಶೃದ್ಧಾನಾಮಕೆ ಅನಿರುದ್ಧನ ತೋರಿಸೆ ||೧|| ಕಾಳಿ ದ್ರೌಪದಿ ಶಿವಕನ್ಯಾ ಮನ್ಮ- ನಾಲಯದಲ್ಲಿ ನಿಲ್ಲೆ ಘನ್ನ ಪ್ರಾಜ್ಞ ಮೌಳಿಮಣಿಯೆ ನಿತ್ಯ ಎನ್ನ ಪರಿ- ಪಾಲಿಸೆ ನಂಬಿದೆ ನಿನ್ನ ಆಹಾ ಶೈಲಜಾ ಶ್ಯಾಮಲ ಪೌಲೋಮಿ ಉಷೇರಿಂದ ವಾಲಗ ಕೈಕೊಂಬ ಕಾಲಾಭಿಮಾನಿಯೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾರುತಿ ಮಜ್ಜನಕ ಮಾರುತಿ

( ರಾಗ ಶಂಕರಾಭರಣ (ಭೈರವಿ) ಅಟತಾಳ) ಮಾರುತಿ ಮಜ್ಜನಕ ಮಾರುತಿ ||ಪ|| ಮಾರುತಿ ಕರುಣಿಸು ಜ್ಞಾನ ಎನ್ನ ಸೇರಿದ ಸತತ ಅಜ್ಞಾನ ಆಹ ದೂರ ಓಡಿಸಿ ಹರಿಆರಾಧನೆಯಿತ್ತು ತೋರಿಸು ಪಥ ಸರ್ವಾಧಾರ ಉದ್ಧಾರನೆ ||ಅ.ಪ|| ದ್ವಿತೀಯ ಯುಗದೊಳವತರಿಸಿ ಸೀತಾ- ಪತಿಯ ಪಾದಕೆ ನಮಸ್ಕರಿಸಿ ರವಿ- ಸುತಗೆ ಒಲಿದು ಉದ್ಧರಿಸಿ ಆಬ್ಧಿ ಅತಿವೇಗದಿಂದ ಉತ್ತರಿಸಿ ಆಹಾ ಕ್ಷಿತಿಜದೇವಿಯನು ತುತಿಸಿ ಮುದ್ರಿಕೆಯಿತ್ತು ದಿತಿಜರ ಸದೆದ ಭಾರತಿಯ ರಮಣನೆ ||೧|| ಕುರುಕುಲದೊಳಗೆ ಉದ್ಭವಿಸಿ ಬಲು ಗರಳ ಪದಾರ್ಥವ ಸಲಿಸಿ ಚೆಲ್ವ ತರುಣಿ ರೂಪವನೆ ಶೃಂಗರಿಸಿ ನಿಶಾ- ಚರ ಕೀಚಕನ ಸಂಹರಿಸಿ ಆಹಾ ಜರೆಯ ಸುತನ ಸೀಳಿ ಧರಣಿಪಾಲಕರನ್ನು ಸೆರೆಯ ಬಿಡಿಸಿ ಕಾಯ್ದ ಪರಮಸಮರ್ಥನೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆ

( ರಾಗ - ಭೈರವಿ( ಸಾರಂಗ) ಆದಿತಾಳ (ತ್ರಿತಾಳ) ) ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನೋ ಜಗದೊಳಗೆ , ಮುಖ್ಯ- ||ಪ|| ಪ್ರಾಣಾಪಾನವ್ಯಾನೋದಾನ ಸ- ಮಾನನೆನಿಪ ಮುಖ್ಯಪ್ರಾಣ ನೀನಲ್ಲದೆ ||ಅ.ಪ|| ವಾಸವ ಕುಲಿಶದಿ ಘಾಸಿಸೆ ಜೀವರ ಶ್ವಾಸ ನಿರೋಧಿಸಿದೆ ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವ ಮುಖ್ಯ- ||೧|| ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯನು ಪುಡುಕೆ ತಿಂಗಳು ಮೀರಲು ಕಪಿವರ- ಪುಂಗವ ಪಾಲಿಸಿದೆ ಮುಖ್ಯ- ||೨|| ಪಾವನ ಪಾಶದಿ ರಾವಣ ನೀಲ ಸು- ಗ್ರೀವ ಮುಖ್ಯರ ಬಿಗಿಯೆ ಸಾವಿರದೈವತ್ತು ಗಾವುದದಲ್ಲಿಹ ಸಂ- ಜೀವನವನು ತಂದೆ ಮುಖ್ಯ- ||೩|| ಪರಿಸರ ನೀನಿರೆ ಹರಿತಾನಿರುವನು ಇರದಿರೆ ತಾನಿರನು ಕರಣ ನಿಯಾಮಕ ಸುರರ ಗುರುವೇ ನೀ- ಕರುಣಿಸೆ ಕರುಣಿಸುವ ಮುಖ್ಯ- ||೪|| ಭೂತೇಂದ್ರಿಯ ದಧಿನಾಥ ನಿಯಾಮಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಪಂಢರಿರಾಯನ

(ರಾಗ - ನಾದನಾಮಕ್ರಿಯೆ (ಮಾಂಡ್ ) ಆದಿತಾಳ (ಕಹರವಾ)) ಕಂಡೆ ಪಂಢರಿರಾಯನ , ತನ್ನನು ಕೊಂಡಾಡುವರ ಪ್ರಿಯನ , ವಿಠಲನ ||ಪ|| ಸಮ ಚರಣ ಭುಜನ ನಿಗಮಾ- ಗಮತತಿಗೆ ಗೋಚರನ ಅಮಿತ ಪರಾಕ್ರಮನ ರುಕ್ಮಿಣಿ- ರಮಣ ಸುಲಕ್ಷಣನ ವಿಠ್ಠಲನ ||೧|| ಕಾಮಿತಾರ್ಥಪ್ರದನ ಸಿರಿತುಲಸಿ ದಾಮ ವಿಭೂಷಣನ ಸಾಮಜ ಪತಿಪಾಲನ ತ್ರೈಜಗ- ತ್ಸ್ವಾಮಿ ಚಿತ್ಸುಖಮಯನ ವಿಠ್ಠಲನ ||೨|| ಗೋಕುಲಪೋಷಕನ ಮುನಿಪುಂಡ- ರೀಕಗೊಲಿದು ಬಂದನ ಲೋಕವಿಲಕ್ಷಣನ ಶರಣರ ಶೋಕವಿನಾಶನನ ವಿಠ್ಠಲನ ||೩|| ಚಂದ್ರಭಾಗವಾಸನ ವಿಧಿ-ವಿಹ- ಗೇಂದ್ರ ಮುಖಾರ್ಚಿತನ ಇಂದ್ರೋತ್ಪಲನಿಭನ ಗುಣಗಣ ಸಾಂದ್ರ ಸುರೋತ್ತಮನ ವಿಠ್ಠಲನ ||೪|| ಶ್ವೇತವಾಹನ ಸಖನ ಸತಿಗೆ ಪಾರಿ- ಜಾತವ ತಂದಿತ್ತವನ ವೀತಶೋಕ ಭಯನ ಶ್ರೀ ಜಗ- ನ್ನಾಥವಿಠ್ಠಲರಾಯನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮನ ನೋಡಿರೈ

( ರಾಗ ಭೈರವಿ(ಬಿಲಾವಲ್ ) ಆದಿತಾಳ (ಕಹರವಾ)) ರಾಮನ ನೋಡಿರೈ , ನಿಮ್ಮಯ ಕಾಮಿತ ಬೇಡಿರೈ ತಾಮರಸಸಖ ಸುವಂಶಾಬ್ಧಿಶರತ್ಸೋಮ , ಕಮಲಾಧಾಮ ||ಪ|| ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದ , ಅಜ ಪೂಜಿಸಿದ ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದ , ಕಾಮಿತ ನೆರೆದ ಭೂತಾಧಿಪನ ಭವನದೊಳಗರ್ಚನೆಗೊಂಡ , ಧೃತಕೋದಂಡ ಮಾತಂಗಾರಿ ವಿರೋಧಿಯ ಜನಕನ ಮೇಧಾ ಕಾರಕೆ ಪೋದ ||೧|| ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿಕೊಟ್ಟ , ಜಗಕತಿದಿಟ್ಟ ನಾಭಿಜನ್ಮನಿಹ ನಗರಾಸ್ಥಾನಕೆ ಬಂದ , ಶುಭಗುಣವೃಂದ ವೈಭವದಿಂದ ಅಯೋಧ್ಯಾನಗರದಿ ಮೆರೆದ , ಕಾಮಿತಗರೆದ ಸಾಭಿಮಾನದಲಿ ಸತಿಯಳಿಗಿತ್ತನು ವರವ , ದೇವರದೇವ ಗರುವ ||೨|| ಜಾಂಬವಂತನಿಗೆ ಜಾನಕಿರಮಣನು ಈತ -ನಿತ್ತನುಧ್ಯಾತಾ ಸಂಭ್ರಮದಲಿ ವೇದಗರ್ಭಮೊಡನಾಡ್ದ , ಮುಕ್ತಿಯ ನೀಡ್ದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಲಿಸೋ ನರಸಿಂಹ

( ರಾಗ - ಶಂಕರಾಭರಣ ( ಭೀಮ್ ಪಲಾಸ್) ಅಟತಾಳ ( ತೀನ್ ತಾಲ್) ) ಪಾಲಿಸೋ ನರಸಿಂಹ ಪಾಲಿಸೊ ||ಪ|| ಪಾಲಿಸೊ ಪರಮಪಾವನ ಕಮ- ಲಾಲಯ ನಂಬಿದೆ ನಿನ್ನ ಆಹಾ ಬಾಲೇಂದುಕೋಟಿಯ ಸೋಲಿಪ ನಖತೇಜ ಮೂರ್ಲೋಕದರಸನೆ ಪಾಲಿಸು ಬಿಡದಲೆ ||ಅ.ಪ|| ಹಿಂದೆ ಪ್ರಹ್ಲಾದನ ಮೊರೆಯ ಕೇಳಿ ಬಂದು ಕಾಯ್ದೆಯೊ ಭಕ್ತಪ್ರಿಯಸಖ ಸಂದೋಹ ಮೂರುತಿ ಆಯತಾಕ್ಷ ಎಂದೆಂದು ಬಿಡದಿರು ಕೈಯ ಆಹಾ ವೃಂದಾರಕೇಂದ್ರಗಳ ಬಂದ ದುರಿತಗಳ ಹಿಂದೆ ಮಾಡಿ ಕಾಯ್ದ ಇಂದಿರಾರಮಣನೆ ||೧|| ಹರಣದಲ್ಲಿ ನಿನ್ನ ರೂಪ ತೋರಿ ಪರಿಹರಿಸೊ ಎನ್ನ ತಾಪ, ದೂರ ಇರದಿರೊ ಹರಿ ಸಪ್ತದ್ವೀಪಾಧಿಪ ಸಿರಿಪತಿ ಭಕ್ತ ಸಲ್ಲಾಪ ಆಹಾ ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ ನರಕಂಠೀರವ ನಿನ್ನ ಚರಣ ಆಶ್ರಯಿಸಿದೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನರಸಿಂಹ ಪಾಹೀ ಲಕ್ಷ್ಮೀನರಸಿಂಹ

( ಕೃತಿಕಾರರು - ಜಗನ್ನಾಥದಾಸರು) ರಾಗ ಶಂಕರಾಭರಣ (ದುರ್ಗಾ) ಅಟತಾಳ ) ನರಸಿಂಹ ಪಾಹೀ ಲಕ್ಷ್ಮೀನರಸಿಂಹ ||ಪ|| ನರಸಿಂಹ ನಮಿಪೆ ನಾ ನಿನ್ನ , ಚಾರು- ಚರಣ ಕಮಲಕೆ ನೀನೆನ್ನ , ಆಹಾ ಕರವ ಪಿಡಿದು ನಿಜಶರಣನೆಂದೆನಿಸು ಭಾ- ಸುರ ಕರುಣಾಂಬುಧೆ ಗರುಡವಾಹನ ಲಕ್ಷ್ಮೀ- ||ಅ.ಪ.|| ತರಳ ಪ್ರಹ್ಲಾದನ ನುಡಿಯ ಕೇಳಿ ತ್ವರಿತದಿ ಬಂದೆ ಎನ್ನೊಡೆಯ, ಏನು ಕರುಣಾಳೊ , ಭಕ್ತರ ಭಿಡೆಯ ಮೀರ- ಲರಿಯೆನೆಂದೆಂದು ಕೆಂಗಿಡಿಯ ಆಹಾ ಭರದಿಂದುಗುಳುತ ಬೊಬ್ಬಿರಿದು ಬೆಂಬೊತ್ತಿ ಕ- ರ್ಬುರ ಕಶಿಪುವಿನ ಮುಂಗುರುಳು ಪಿಡಿದೆ ಲಕ್ಷ್ಮೀ- ||೧|| ಪ್ರಳಯಾಂಬುನಿಧಿ ಘನ ಘೋಷದಂತೆ ಘುಳಿಘುಳಿಸುತಲಿ ಪ್ರದೋಷಕಾಲ ತಿಳಿದು ದೈತ್ಯನ ಅತಿರೋಷದಿಂದ- ಪ್ಪಳಿಸಿ ಮೇದಿನಿಗೆ ನಿರ್ದೋಷ ಆಹಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದನೆ ಪಾಲಿಸು

ರಾಗ - ಕಾಂಬೋಧಿ - ಕೀರ್ವಾಣಿ (ಮಾಲಕಂಸ್) ಝಂಪೆತಾಳ ಕೃತಿಕಾರರು- ಜಗನ್ನಾಥದಾಸರು ಇದನೆ ಪಾಲಿಸು ಜನ್ಮಜನ್ಮಗಳಲಿ ಮಧುಸೂದನನನೆ ನಿನ್ನ ಸ್ಮರಣೆ ದಾಸರ ಸಂಗ ||ಪ|| ಪುಣ್ಯ-ಪಾಪ ಜಯಾಜಯ ಕೀರ್ತಿ ಅಪಕೀರ್ತಿ ಮನ್ಯು ಮೋಹಾಸಕ್ತಿ ಕಾಮಲೋಭಾ ನಿನ್ನಧೀನವು ಎನ್ನದಲ್ಲವೆಂದಿಗು ಪ್ರಕೃತಿ- ಜನ್ಯಗುಣ ಕಾರ್ಯವೆಂಬ ಜ್ಞಾನವೇ ಸತತ ||೧|| ಗುಣಕರ್ಮಕಾಲಗಳ ಮನೆಮಾಡಿ ಜೀವರಿಗೆ ಉಣಿಸುತಿಹೆ ಸುಖದುಃಖ ಘನಮಹಿಮನೆ ಗುಣಗಳಭಿಮಾನಿ ಶ್ರೀವನಿತಾರಮಣ ಪ್ರಯೋ- ಜನವಿಲ್ಲದಲೆ ಮಾಡಿ ಜನರ ಮೋಹಿಸೆಯೆಂಬ ||೨|| ಈಶ ನೀನಾದ ಕಾರಣದಿಂದ ಸುಖದುಃಖ ಲೇಶವಿಲ್ಲವು ಸರ್ವಕಾಲಗಳಲಿ ಕೇಶವಜಗನ್ನಾಥವಿಥಲನೆ ಭಕ್ತರ ಪ್ರ- ಯಾಸವಿಲ್ಲದೆ ಕಾದಿಯೆಂಬಾ ಸ್ಮರಣೆಯ ನಿರುತ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು