ಅತಿ ಶೋಭಿಸುತಿದೆ ಶ್ರೀಪತಿಯ ವಾಹನ

ಅತಿ ಶೋಭಿಸುತಿದೆ ಶ್ರೀಪತಿಯ ವಾಹನ

(ರಾಗ - ಕಾಂಬೋಧಿ (ಭೂಪ್) ಝಂಪೆತಾಳ) ಅತಿ ಶೋಭಿಸುತಿದೆ ಶ್ರೀಪತಿಯ ವಾಹನ ||ಪ|| ಚತುರ್ದಶಲೋಕದಲಿ ಅಪ್ರತಿವಾಹನ ||ಅ.ಪ|| ವಿನತೆ ಕಶ್ಯಪಮುನಿಗೆ ತನಯನೆನಿಸಿದ ವಾಹನ ಅನುಜರನು ಕದ್ದೊಯ್ದ ಆಢ್ಯವಾಹನ ವನದಿ ಮಧ್ಯದಿ ನಾವಿಕರ ಭಕ್ಷಿಸಿದ ವಾಹನ ಜನಕನಾಜ್ಞದಿ ಕೂರ್ಮಗಜರ ನುಂಗಿದ ವಾಹನ ||೧|| ಕುಲಿಶ ಪಾಣಿಯ ಕೂಡೆ ಕಲಹ ಮಾಡಿದ ವಾಹನ ಒಳಹೊಕ್ಕು ಪೀಯೂಷ ತಂದ ವಾಹನ ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ ಬಲಿರಾಯ ಒಯ್ದ ಮಕುಟವ ತಂದ ವಾಹನ ||೨|| ಕಾಲನಾಮಕನಾಗೆ ಕಮಲಭವನಲಿ ಜನಿಸಿ ಕಾಲಾತ್ಮ ಹರಿಯ ಸೇವಿಪವಾಹನ ಕಾಳಗದಿ ಕಪಿವರರ ಕಟ್ಟು ಬಿಡಿಸಿದ ವಾಹನ ಸೌಪರ್ಣಿಪತಿಯೆಂಬ ಹೊಂಬಣ್ಣವಾಹನ ||೪|| ಪನ್ನಗಾಶನ ವಾಹನ ಪತಿತಪಾವನ ವಾಹನ ಸನ್ನುತಿಪ ಭಕ್ತರನು ಸಲಹುವ ವಾಹನ ಪನ್ನಗಾದ್ರಿನಿವಾಸ ಜಗನ್ನಾಥವಿಠಲಗೆ ಉನ್ನತ ಪ್ರಿಯವಾದ ಗರುಡವಾಹನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು