ಭಾರತೀ ಮಜ್ಜನನೀ

ಭಾರತೀ ಮಜ್ಜನನೀ

ರಾಗ-ಶಂಕರಾಭರಣ (ಭೈರವಿ) ಅಟತಾಳ (ದಾದರಾ) ಭಾರತೀ ಮಜ್ಜನನೀ ಭಾರತೀ- ||ಪ|| ಭಾರತೀ ಭರತನರ್ಧಾಂಗಿ ಕರು- ಣಾರಸಪೂರಿತ ಪಾಂಗಿ ಆಹಾ ತಾರ್ಕ್ಷ್ಯ ಪ್ರಮುಖ ವೈಕಾರಿಕ ದೇವ ಗ- ಣಾರಾಧಿತಾಂಘ್ರಿ ಸರೋರುಹೆ ಪಾಲಿಸು ||ಅ.ಪ|| ವಿದ್ಯುನ್ನಾಮಕೆ ವಿಧಿಜಾತೆ ಕೃತಿ ಪ್ರದ್ಯುಮ್ನ ಜಠರಸಂಭೂತೆ ಅನ- ವದ್ಯ ಸದ್ಗುಣ ಗಣವ್ರಾತೆ ಬ್ರಹ್ಮ- ವಿದ್ಯವ ಪಾಲಿಸು ಮಾತೆ ಆಹಾ ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ಪೆತ್ತ ಶೃದ್ಧಾನಾಮಕೆ ಅನಿರುದ್ಧನ ತೋರಿಸೆ ||೧|| ಕಾಳಿ ದ್ರೌಪದಿ ಶಿವಕನ್ಯಾ ಮನ್ಮ- ನಾಲಯದಲ್ಲಿ ನಿಲ್ಲೆ ಘನ್ನ ಪ್ರಾಜ್ಞ ಮೌಳಿಮಣಿಯೆ ನಿತ್ಯ ಎನ್ನ ಪರಿ- ಪಾಲಿಸೆ ನಂಬಿದೆ ನಿನ್ನ ಆಹಾ ಶೈಲಜಾ ಶ್ಯಾಮಲ ಪೌಲೋಮಿ ಉಷೇರಿಂದ ವಾಲಗ ಕೈಕೊಂಬ ಕಾಲಾಭಿಮಾನಿಯೆ ||೨|| ವಂದಿಪೆ ನಿನಗೀಂದ್ರ ಸೇನಾ ನಳ ನಂದಿನಿ ಕರುಣಿಸು ಜ್ಞಾನ ಶ್ರೀ ಮು- ಕುಂದನ ಪರಮಕಲ್ಯಾಣಿ ಗುಣ ಸಿಂಧುವಿನೊಳಗೆ ಪೀಠಿಣಿ ಆಹಾ ದ್ವಂದ್ವದಿ ಚರಿಸುವ ಗಂಧವಾಹನ ರಾಣಿ ಸಿಂಧೂರಗಮನೆ ಪುರಂದರಾರಾಧಿತೆ ||೩|| ಗುಣತ್ರಯತ್ಮಕವಾದ ಲಿಂಗದೊಳು ಅಣಿರೂಪಳಾಗಿ ತುರಂಗ ಮುಖ ಅನಿಲಾಂತರ್ಗತ ಪಾಂಡುರಂಗನಂಘ್ರಿ ವನಜಯುಗಲ ಮತ್ತಭೃಂಗ ಆಹಾ ಎನಿಸಿ ತತ್ವಕಾರ್ಯ ಅನಿರುದ್ಧ ದೇಹಸ್ಥ ಅನಿಮಿಷರೊಳು ಪೊಕ್ಕು ದ್ವಿನವರೂಪದಿ ಮಾಳ್ಪೆ ||೪|| ನಿಗಮತತಿಗಳಭಿಮಾನಿ ನಿನ್ನ ಪೊಗಳಲೆನ್ನೊಶವೆ ಕಲ್ಯಾಣಿ ಆ ಪ- ನ್ನಗರಾಜ ಸಾಹಸ್ರವಾಣಿಯಿಂದ ಬಗೆಬಗೆ ತುತಿಪ ಸುಶ್ರೋಣಿ ಆಹಾ ಮುಗಿವೆ ಕರಗಳೆನ್ನವಗುಣವನೆಣಿಸದೆ ಜಗನ್ನಾಥವಿಠಲನಂಘ್ರಿಗಳ ಧ್ಯಾನವೀಯೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು