ಗೋಪಾಲದಾಸ

ಮನೆಯ ಕಟ್ಟುವರುಂಟು

ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು ಧನವ ಗಳಿಸುವರುಂಟು ಗಳಿಸದಿದ್ದವರುಂಟು ಧನವ ಕಟ್ಟುವರುಂಟು ದಾನ ಮಾಡುವರುಂಟು ಋಣವ ಕೊಟ್ಟವರುಂಟು ಋಣ ಮಾಡಿದವರುಂಟು ಮಣೆಗಾರತನವಿದರೊಳೆಂದಿಗೂ ಬೇಡ ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಭಾರತಿ ಭಕುತಿಯನು ಕೊಡುವದು

ರಾಗ: ಸುರಟಿ ಆದಿತಾಳ ಭಾರತಿ ಭಕುತಿಯನು ಕೊಡುವದು ಮಾರುತ ಸತಿ ನೀನು ||ಪ|| ಮೂರು ಲೋಕದೊಳಗಾರು ನಿನಗೆ ಸರಿ | ಮಾರಾರಿಗಳಿಂದಾರಾಧಿತಳೆ ||ಅ. ಪ|| ವಾಣಿ ಎನ್ನ ವದನದಲ್ಲಿಡು ಮಾಣದೆ ಹರಿಸ್ತವನ| ವೀಣಾಧೃತ ಸುಜ್ಞಾನಿಯೆ ಪಂಕಜ | ಪಾಣಿಯೇ ಕೋಕಿಲ ವಾಣಿಯೇ ಪಾಲಿಸೆ
ದಾಸ ಸಾಹಿತ್ಯ ಪ್ರಕಾರ
ಬರೆದವರು