ಕನಕದಾಸ

ಬೀಜ ಮೂರನು ಬಿತ್ತಿ ಸಾಜ ಬೀಜವ ತೋರಿರಿ

ರಾಗ: ಸೌರಾಷ್ಟ್ರ ತಾಳ: ಮಟ್ಟೆ ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ರಾಜರಿಗೆ ಒಂದು ಫಲ ರಾಜ್ಯಕ್ಕೆ ಎರಡು || ಬೀಜ ಕರಿದಕೆ ಕಾಲು ಬೀಜ ಬಿಳಿದಕೆ ಮೋರೆ ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು ರಂಜಕದ ಬೇರಿಗೆ ರಾಗ ಮುವತ್ತೆರಡು ಕುಂಜರದಗಮನೆ ಕೋವಿದನರಸಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ

ರಾಗ: ಮೋಹನ ತಾಳ: ಅಟ ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ ಭೃಷ್ಟಮಾನವ ನಿನ್ನ ಹಣೆಯ ಬರಹವಲ್ಲದೆ ಇಲ್ಲ || ಸಿರಿವಂತರ ಸ್ನೇಹಮಾಡಿ ನಡೆದರಿಲ್ಲ ಪರಿಪರಿಯಲ್ಲಿ ವಿದ್ಯೆ ಕಲಿತರಿಲ್ಲ ನರಿಯ ಬುದ್ಧಿಯಲ್ಲಿ ನಡೆದುಕೊಂಡರು ಇಲ್ಲ ಅರಿಯದೆ ಹಲವ ಹಂಬಲಿಸಿದರಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಳು ನಾರಾಯಣ ಏಳು ಲಕ್ಷ್ಮೀರಮಣ

ಏಳು ನಾರಾಯಣ ಏಳು ಲಕ್ಷ್ಮೀರಮಣ ಏಳು ಶ್ರೀಗಿರಿಗೊಡೆಯ ಶ್ರೀವೆಂಕಟೇಶ ಏಳಯ್ಯ ಬೆಳಗಾಯಿತು || ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ ಶೇಷಶಯನನೆ ಏಳು ಸಮುದ್ರ ಮಂಥನವ ಮಾಡು ದೇಶ ಕೆಂಪಾಯಿತು ಏಳಯ್ಯ ಹರಿಯೇ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಷ್ಟು ದಿನ ಈ ವೈಕುಂಠ

ಇಷ್ಟು ದಿನ ಈ ವೈಕುಂಠ

ಎಷ್ಟು ದೂರವೋ ಎನುತಲಿದ್ದೆ

ದೃಷ್ಟಿಯಿಂದಲಿ ನಾನು ಕಂಡೆ

ಸೃಷ್ಟಿಗೀಶನೇ ಶ್ರೀರಂಗಶಾಯಿ ||

 

ಎಂಟು ಏಳನು ಕಳೆದುದರಿಂದ

ಬಂಟರೈವರ ತುಳಿದುದರಿಂದ

ಕಂಟಕನೊಬ್ಬನ ತರಿದುದರಿಂದ

ಬಂಟನಾಗಿ ಬಂದನೋ ಶ್ರೀರಂಗಶಾಯಿ ||

 

ವನ ಉಪವನಗಳಿಂದ

ಘನ ಸರೋವರಗಳಿಂದ

ಕನಕ ಗೋಪುರಗಳಿಂದ

ಘನಶೋಭಿತನೆ ಶ್ರೀರಂಗಶಾಯಿ ||

 

ವಜ್ರ ವೈಢೂರ್ಯದ ತೊಲೆಗಳ ಕಂಡೆ

ಪ್ರಜ್ವಲಿಪ ಮಹಾದ್ವಾರವ ಕಂಡೆ

ನಿರ್ಜರಾದಿ ಮುನಿಗಳ ಕಂಡೆ

ದುರ್ಜನಾಂತಕನೆ ಶ್ರೀರಂಗಶಾಯಿ ||

 

ರಂಭೆ ಊರ್ವಶಿಯರ ಮೇಳವ ಕಂಡೆ

ತುಂಬುರು ಮುನಿ ನಾರದರನು ಕಂಡೆ

ಅಂಬುಜೋದ್ಭವ ರುದ್ರರ ಕಂಡೆ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ

ಕನಕದಾಸರು ಇಂದಿನವರಲ್ಲ. ಅವರು ವಿಜಯನಗರ ಸಾಮ್ರಾಜ್ಯದ ಪತನವನ್ನು ಕಂಡವರು. ಸ್ವತಹ ಅಧಿಕಾರಿಯಾಗಿ, ಪಾಳೆಯಗಾರರಾಗಿ ಧನಸಂಪತ್ತು ಗಳಿಸಿ ಅನುಭವಿಸಿದವರು, ವೈರಾಗ್ಯಬಂದು ಎಲ್ಲವನ್ನು ತ್ಯಜಿಸಿ ತಿಮ್ಮಪ್ಪ ಕನಕನಾಯಕರಾಗಿದ್ದವರು, ಹರಿದಾಸರಾಗಿ, ಕನಕದಾಸರಾದರು.
ದಾಸ ಸಾಹಿತ್ಯ ಪ್ರಕಾರ
ಬರೆದವರು

ತೀರ್ಥವನು ಪಿಡಿದವರೆಲ್ಲ

ಬರೆದದ್ದು : ಕನಕದಾಸರು ರಾಗ : ಶಂಕರಾಭರಣ ತಾಳ : ಆದಿ ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ ಜನ್ಮ || ಪ || ಸಾರ್ಥಕವಿಲ್ಲದವರೆಲ್ಲ ಭಾಗವತರೆ || ಅ || ಮೂಗುಪಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿ ಭಾಗವತ ಶಾಸ್ತ್ರಗಳನೆಲ್ಲ ಓದಿ ಬಾಗಿ ಪರಸತಿಯರನು ಬಯಸಿ ಕಣ್ಣಿಡುವಂಥ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಿರುವನೋ ರಂಗ

ಎಲ್ಲಿರುವನೋ ರಂಗ ರಾಗ : ಮುಖಾರಿ ತಾಳ: ಝಂಪೆ ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ || ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು|| ಅ || ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು ಭರದೊದೆಯಲವನಪಿತ ಕೋಪದಿಂದ ಸ್ಥಿರವಾದೊಡೀ ಕಂಭದಲಿ ತೋರು ತೋರೆನಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

ಬರೆದದ್ದು : ಕನಕದಾಸರು ರಾಗ : ಅಠಾಣ ತಾಳ : ಅಟ ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ || ಪಲ್ಲವಿ || ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ || ಅನುಪಲ್ಲವಿ || ಪರಮಪದದೊಳಗೆ ವಿಷಧರನ ತಲ್ಪದಲಿ ನೀ ಸಿರಿಸಹಿತ ಕ್ಷೀರವಾರಿಧಿಯೊಳಿರಲು ಕರಿರಾಜ ಕಷ್ಟದಲಿ ಆದಿಮೂಲ ಎಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು