ಉಗಾಭೋಗ

Haridasa compositions that fall under ugAbgOga category

ಅಲ್ಲದ ಕರ್ಮವ ಆಚರಿಸಿದವ ಕೆಟ್ಟ

ಅಲ್ಲದ ಕರ್ಮವ ಆಚರಿಸಿದವ ಕೆಟ್ಟ ಎಲ್ಲರೊಳಗೆ ವಿರೋಧಿಸಿದವ ಕೆಟ್ಟ ಬಲ್ಲಿದರೊಡನೆ ಸೆಣಸಾಡುವವ ಕೆಟ್ಟ ಲಲ್ಲೆಮಾತಿನ ಸತಿಯ ನಂಬಿದವ ಕೆಟ್ಟ ಪುಲ್ಲನಾಭ ನಮ್ಮ ಪುರಂದರವಿಠಲನ ಮೆಲ್ಲಡಿ ನಂಬದವ ಕೆಟ್ಟ ನರಗೇಡಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುರಿಯ ನೆಚ್ಚವನೆ ಬಿಲ್ಲಾಳು

ಗುರಿಯ ನೆಚ್ಚವನೆ ಬಿಲ್ಲಾಳು ಹರಿಯ ಭಜಿಸಲರಿಯದವನೆ ಮಾಸಾಳು ಹರಿಯೆಂದು ಓದದೆಲ್ಲವು ಹಾಳು ಪುರಂದರವಿಠಲ ಪಾರ್ಥನ ಮನೆಯಾಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದಿನ ದಿನ ಶುಭದಿನ

ಇಂದಿನ ದಿನ ಶುಭದಿನ ಇಂದಿನ ವಾರ ಶುಭವಾರ ಇಂದಿನ ತಾರೆ ಶುಭತಾರೆ ಇಂದಿನ ಕರಣ ಶುಭಕರಣ ಇಂದಿನ ಯೋಗ ಶುಭಯೋಗ ಇಂದಿನ ಲಗ್ನ ಶುಭಲಗ್ನ ಇಂದು ಪುರಂದರವಿಠಲರಾಯನ ಪಾಡಿದ ದಿನವೆ ಶುಭದಿನವು ( /ಸಂದರುಶನ ಫಲವೆಮಗಾಯಿತು)||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಲವು ಕರ್ಮಗಳಿಗೆ ಹವಣಿ ಎರಡಾಚಮನೆ

(ಆಚಮನ) ಹಲವು ಕರ್ಮಗಳಿಗೆ ಹವಣಿ ಎರಡಾಚಮನೆ ಮಲಮೂತ್ರ ವಿಸರ್ಜನಕೆ ಮಾಡು ಮೂರಾಚಮನೆ ನಲಿದುಂಡ ಮೇಲೆ ನಾಲ್ಕಾಚಮನೆ ಲಲನೆಯ ಸಂಗಕ್ಕೆ ಮಾಡು ಅಯಿದಾಚಮನೆ- ಯೆಂದ ಲಕ್ಷ್ಮೀಪತಿ ಪುರಂದರವಿಠಲೇಶ್ವರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಕ್ಷತ್ರಗಳ ಕಂಡ ನರನಿಗೆ

(ಸಂಧ್ಯಾವಂದನೆ) ನಕ್ಷತ್ರಗಳ ಕಂಡ ನರನಿಗೆ ಉತ್ತಮಸಂಧ್ಯಾ ನಕ್ಷತ್ರ ಒಂದೆರಡು ಕಂಡ ನರನಿಗೆ ಮಧ್ಯಮಸಂಧ್ಯಾ ನಕ್ಷತ್ರ ಒಂದನೂ ಕಾಣದ ನರನಿಗೆ ಅಧಮಸಂಧ್ಯಾ ನಕ್ಷತ್ರ ಬಿಟ್ಟರೆ (ನರನನು) ನಾರಾಯಣ ಪುರಂದರವಿಠಲ ಬಿಡುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರೇ ಗೋವಿಂದ ಎಂದೇಳು

(ಪ್ರಾತಃಸ್ಮರಣ) ಹರೇ ಗೋವಿಂದ ಎಂದೇಳು ಹತ್ತವತಾರವ ಪೇಳು ಮೂಡಲದೆಸೆಗೆ ನಡೆ ಗೋವಿಪ್ರತುಳಸಿಗೆ ಎರಗಿ ಬಂದು ನೈರುತ್ಯದಲ್ಲಿ ತೃಣವನಿಟ್ಟು ಶೌಚ ಮಾಡು(/ಮಲಮೂತ್ರಂಗಳ ಬಿಟ್ಟು) ಗುರು ಪರಂಪರೆಯೆಂದು ಪುರಂದರವಿಠಲ ಎನ್ನು||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹತ್ತೈದು ಗಳಿಗೆಯ ಮೇಲೆ ಮತ್ತೈದು ಬರಲೆದ್ದು

(ಪ್ರಾತಃಸ್ಮರಣ) ಹತ್ತೈದು ಗಳಿಗೆಯ ಮೇಲೆ ಮತ್ತೈದು ಬರಲೆದ್ದು ಚಿತ್ತಜನಯ್ಯನ ಚಿತ್ತದಿ ಧ್ಯಾನಿಸಿ ಅತ್ತ ಉದಯಕ್ಕೆ ಘಳಿಗೆ ಎರಡಿರುವಲ್ಲಿ ನಿತ್ಯ ಸ್ನಾನವ ಮಾಡಿ ಆದಿತ್ಯಗರ್ಘ್ಯವನೀಯೆ ಉತ್ತಮಜನರು ಪೊತ್ತಿದ್ದ ಪಾಪಗಳನೆಲ್ಲ ಉತ್ತರಿಸುವೆನೆಂದಾ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನುಡಿವೆ ಲಿಂಗ ಶೌಚಕ್ಕೊಮ್ಮೆ

(ಮೃತ್ತಿಕಾ ಸ್ನಾನ) ನುಡಿವೆ ಲಿಂಗ ಶೌಚಕ್ಕೊಮ್ಮೆ ಗುದಕ್ಕೆ ಮೂರು ನೆಲ್ಲಿಕಾಯಿಯಷ್ಟು ಮಣ್ಣ ಹಚ್ಚಿ ನೀರೊಳು ತೊಳೆದು ಬಲಗೈಗೆ ಅಯ್ದು ಮಣ್ಣು ಎಡದ ಕೈಗೆ ಏಳು ಮಣ್ಣು ಜೋಡು ಪಾದಕ್ಕೆ ಅಯಿದೈದು ಮಣ್ಣು ಅಯಿದು ಕಡೆಯೊಳಿಟ್ಟು ಪುರಂದರವಿಠಲ ಎನ್ನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಲ ಮೂತ್ರ ಮಾಡುವಾಗ

(ಮಲ ಮೂತ್ರ ವಿಸರ್ಜನ) ಮಲ ಮೂತ್ರ ಮಾಡುವಾಗ ಕರದಲ್ಲಿ ಜಲವಿರೆ ಮಲಕೆ ಸಮಾನ ಅದು ಶುದ್ಧವಲ್ಲ ವಿಲಸಿತ ಕರ್ಮವಾಚರಿಸಿ ಹರಿಯ ನೆನೆಯು ಒಲಿವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎರಡು ಘಳಿಗೆ ಬೆಳಗು ಇರಲು

(ಸ್ನಾನ) ಎರಡು ಘಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ ಕರವ ಮುಗಿದು ಮಾಡೊ ಸಂಕಲ್ಪವೇದ ಪರಮಪುಣ್ಯಾತ್ಮ ಬ್ರಾಹ್ಮಣ ಧರ್ಮವೆಂದು ಪುರಂದರವಿಠಲ ಮೆಚ್ಚಿ ಪಾಲಿಸುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು