ಆರು ಬದುಕಿದರಯ್ಯ
ರಾಗ : ಮುಖಾರಿ ತಾಳ : ತ್ರಿಪುಟ
ಆರು ಬದುಕಿದರಯ್ಯ ಹರಿ ನಿನ್ನ ನಂಬಿ || ಪಲ್ಲವಿ ||
ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ || ಅನುಪಲ್ಲವಿ ||
ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ
ಮೊಲೆಯನುಣ್ಣಲು ಪೋಗಿ ಪೂತನಿಯ ಕೊಂದೆ || ೧ ||
ಕರುಳೊಳಗೆ ಕತ್ತರಿಯನಿಟ್ಟು ಹಂಸಧ್ವಜನ
ಸರಸದಿಂ ಮಗಳ ಗಂಡನ ಕೊಲಿಸಿದೆ
ಮರುಳಿನಿಂದಲಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ನರಕಾಸುರನ ಹೆಂಡತಿಯ ತಂದೆ || ೨ ||
ತಿರಿದುಂಬ ದಾಸರಕೈಯ ಕಪ್ಪವ ಕಟ್ಟಿಸಿಕೊಂಡೆ
ತಿರುಮಲಾಚಾರ್ಯ ಶ್ರೀ ಗುರುವೇ ಬಲ್ಲ
ವರ ಕಾಗಿನೆಲೆಯಾದಿ ಕೇಶವನ ಭಜಿಸಿದರೆ
ತಿರಿವೆನೆಂದರೆ ತಿರುಪೆಕೊಳ್ಪುಟ್ಟದೈ ಕೃಷ್ಣ || ೩ ||
Forums
- Log in to post comments
ಉ: ಆರು ಬದುಕಿದರಯ್ಯ