ಲೋಕ ಭರಿತನೋ

ಲೋಕ ಭರಿತನೋ

ಲೋಕ ಭರಿತನೋ ರಂಗಾನೇಕ ಚರಿತನೊ ||ಪ|| ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ|| ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು- ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ| ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ| ಉತ್ತರೆಯ ಗರ್ಭದಲ್ಲಿ ಸುತ್ತುಮುತ್ತಿದ ಅಸ್ತ್ರವನ್ನು ಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ| ಜ್ಞಾನಶೂನ್ಯನಾಗಿ ಸೊಕ್ಕಿ ನಾನೇ ವಾಸುದೇವನೆಂದ ದೀನ ಪೌಂಡ್ರಕನ ಶಿರವ ಜಾಣರಾಯ ಖಂಡಿಸಿ ಮೆರೆದ| ತನ್ನ ಸೇವಕಜನರ ಪೊರೆದು ಉನ್ನತ ಉಡುಪಿಯಲ್ಲಿ ನಿಂತು ಘನ್ನ ಮಹಿಮೆಯಿಂದ ಮೆರೆವ ಪ್ರಸನ್ನ ಹಯವದನನ ಕೃಷ್ಣ|
ದಾಸ ಸಾಹಿತ್ಯ ಪ್ರಕಾರ
ಬರೆದವರು