ಏನು ಧನ್ಯಳೋ ಲಕುಮಿ

(ರಾಗ ತೋಡಿ ಅಟತಾಳ) ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳೋ ||ಪ| ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ ಸಾಟಿಯಿಲ್ಲದೆ ಮಾಡಿ ಪೂರ್ಣನೋಟದಿಂದ ಸುಖಿಸುತಿಹಳೋ || ೧|| ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾದವ ನೀ ಬಾ

(ರಾಗ ಕಾಂಭೋಜ ಏಕತಾಳ) ಯಾದವ ನೀ ಬಾ ಯದುಕುಲನಂದನ | ಮಾಧವ ಮಧುಸೂಧನ ಬಾರೋ || ಸೋದರ ಮಾವನ ಮಧುರೆಲಿ ಮಡುಹಿದ ಯ- ಶೋದೆಕಂದ ನೀ ಬಾರೋ || ಪ|| ಶಂಖಚಕ್ರವು ಕೈಯಲಿ ಹೊಳೆಯುತ | ಬಿಂಕದ ಗೋವಳ ನೀ ಬಾರೋ || ಅಕಳಂಕಮಹಿಮನೆ ಆದಿನಾರಾಯಣ | ಬೇಕೆಂಬ ಭಕುತರಿಗೊಲಿಬಾರೋ || ೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ

(ರಾಗ ಕಾಂಭೋಜ ತ್ರಿಪುಟತಾಳ) ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ||ಪ|| ಕಷ್ಟಗಳೆಲ್ಲಾ ಪರಿಹರಿಸಿ ಮನ- ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ || ಅ|| ಮಸ್ತಕದಲಿ ಮಾಣಿಕ್ಯದ ಕಿರೀಟ ಕಸ್ತೂರಿ ತಿಲಕದಿಂದೆಸೆವ ಲಲಾಟ ಶಿಸ್ತಿಲಿ ಕೊಳಲನೂದುವ ಓರೆ ನೋಟ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಳುವೊದ್ಯಾತಕೊ ರಂಗ

ರಾಗ: ಭೈರವಿ ಆದಿ ತಾಳ ಅಳುವದ್ಯಾತಕೊ ರಂಗಾ | ಅತ್ತರಂಜಿಸುವ ಗುಮ್ಮಾ |ಪ| ಪುಟ್ಟಿದೇಳು ದಿವಸದಲ್ಲಿ | ದುಷ್ಟ ಪೂತನಿಯ ಕೊಂದಿ | ಮುಟ್ಟಿ ಮೊಲೆಯ ಹಾಲುಂಡ ಕಾರಣ | ದೃಷ್ಟಿ ತಾಕಿತೆ ನಿನಗೆ ಕಂದಯ್ಯ ಬಾಲಕತನದಲ್ಲಿ ಗೋ | ಪಾಲರೊಡಗೂಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚೋರಗೆ ಚಂದ್ರೋದಯ

ಈ ಉಗಾಭೋಗವನ್ನು ಶ್ರೀ ವಿದ್ಯಾಭೂಷಣರು ಪಂತುವರಾಳಿ ರಾಗದಲ್ಲಿ ಹಾಡಿದ್ದಾರೆ. ಚೋರಗೆ ಚಂದ್ರೋದಯ ಸೊಗಸುವುದೇ ಜಾರಗೆ ಸೂರ್ಯೋದಯ ಸೊಗಸುವುದೇ ಶ್ರೀ ರಮಣನ ಕಥೆಯು ಕಳ್ಳಗೆ ಮೆಚ್ಚುವುದೇ| ನಾರಿಗೆ ನಯವಿಲ್ಲದ ಚೆಲುವಿಕೆಯು ಹರಿಸ್ಮರಣವಿಲ್ಲದ ಹಾಡಿಕೆಯು
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?

ಪಲ್ಲವಿ : ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ? ಅನುಪಲ್ಲವಿ: ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರು ಚರಣ: 1: ನಂದಗೋಪನ ಮಂದಿರಗಳ ಸಂದುಗೊಂದಿನಲಿ ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ ಸುಂದರಾಂಗದ ಸುಂದರಿಯರ ಹಿಂದು ಮುಂದಿನಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಘಟಿಕಾಚಲದಿ ನಿಂತ ಶ್ರೀ ಹನುಮಂತ

ಘಟಿಕಾಚಲದಿ ನಿಂತ ಶ್ರೀ ಹನುಮಂತ ಘಟಿಕಾಚಲದಿ ನಿಂತ ಪಟು ಹನುಮಂತನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಪಲ್ಲವಿ|| ಚತುರ ಯುಗದಿ ತಾನು ಮುಖ್ಯಪ್ರಾಣನು ಚತುರ್ಮುಖನಯ್ಯನ ಚತುರ ಮೂರುತಿಗಳ ಚತುರತನದಿ ಭಜಿಸಿ ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು

ಪಲ್ಲವಿ: ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು ಶ್ರೀ ರಾಮ ಸೇವೆಗೆ ತಡವಾಯಿತೇಳು ಚರಣಗಳು: ಸೇತು ಕಟ್ಟಲು ಬೇಕು ಶರಧಿ ದಾಟಲು ಬೇಕು ಮಾತೆಗೆ ಉಂಗುರ ಕೊಡಲುಬೇಕು ಪಾತಕಿ ರಾವಣನ ಶಿರವನಳಿಯಲುಬೇಕು ಸೀತೆಪತಿ ರಾಮನಿಗೆ ನಮಿಸಬೇಕು ಇಂತು ಕಳೆಯಲು ಬೇಕು ಅಜ್ಞಾತವಾಸವನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಲ್ಯಾಣಂ ತುಳಸಿ ಕಲ್ಯಾಣಂ

ಕಲ್ಯಾಣಂ ತುಳಸಿ ಕಲ್ಯಾಣಂ ಕಲ್ಯಾಣಂ ತುಳಸಿ ಕಲ್ಯಾಣಂ|| ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ ಬಲ್ಲಿದ ಶ್ರೀ ವಾಸುದೇವನಿಗೆ||ಕಲ್ಯಾಣಂ..|| ಅಂಗಳದೊಳಗೆಲ್ಲ ತುಳಸಿಯ ವನ ಮಾಡಿ ಶೃಂಗಾರ ಮಾಡಿ ಶೀಘ್ರದಿಂದ| ಕಂಗಳ ಪಾಪವ ಪರಿಹರಿಸುವ ಮುದ್ದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೈ ಬಾರೈ ಭಾರತಿ ಮನೋಹರ

ಬಾರೈ ಬಾರೈ ಭಾರತಿ ಮನೋಹರ ಮಾರುತಿ ಗುರುವರನೆ ದೇವ || ಪಲ್ಲವಿ || ಪವನದೇವ ಬಾರೊ ಪವಿಸಮಗಾತ್ರ ಬಾರೊ ರವಿಜನ ಭವಭಯಹರ ಪಾವನ ಮೂರುತಿ || ೧ || ಮಧ್ವಮುನಿಯೆ ಬಾರೊ ಉದ್ಧರಿಸಲು ಬಾರೊ ಶುದ್ಧ ಮುಕುತಿದಾತ ದದ್ಧಲಪುರವಾಸ || ೨ || ಗಂಧವಾಹನ ಬಾರೊ ಸಿಂಧುಬಂಧನ ಬಾರೊ ಮಂಧರೋದ್ಧರ ಶಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು