ಶ್ರೀಪಾದರಾಯ

ಶ್ರೀ ರಾಮ ನಿನ್ನ ಪಾದವ ತೋರೋ

(ಪೂರ್ವಿ ರಾಗ ಖಂಡ ಛಾಪು ತಾಳ) ಶ್ರೀ ರಾಮ ನಿನ್ನ ಪಾದವ ತೋರೋ ಮೋಹನ್ನ ಗುಣಧಾಮ ನಿನ್ನ ಮೋಹದ ಪಾದವ ||ಪ|| ವರಗುಣಜಾಲ ಸುರಗುಣಲೋಲ ಕರುಣಾಲವಾಲ ತರುಣೀ ಪರಿಪಾಲ ||೧|| ಅಜಭವಪೂಜಿತ ಗಜವರಭಾವಿತ ಸುಜನರ ಸೇವಿತ ತ್ರಿಜಗವಂದಿತ ||೨|| ಅಂಗಜ ಜನಕ ವಿಹಂಗತುರಂಗ ತುಂಗವಿಕ್ರಮ ಶ್ರೀರಂಗವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಂದೆ ಕೆಟ್ಟು ಬಂದವರ

ಮುಂದೆ ಕೆಟ್ಟು ಬಂದವರ ಹಿಂದಕೆ ಹಾಕಿಕೊಂಡ ಬಳಿಕ ಬಂದ ಗುಣದೋಷಗಳ ಎಣಿಸುವರೆ ಎಲೆ ದೇವಾ ! ಅಂದವಲ್ಲ ನಿನ್ನ ಘನತೆಗೆ ತಂದೆತಾಯಿಗಳು ತಮ್ಮ ಕಂದನವಗುಣಗಳೆಣಿಸುವರೆ ? ಎಂದೆಂದಿಗೆನ್ನ ಉದ್ಧರಿಸಬೇಕೆಲೆ ದೇವ ಸಂದೇಹವ್ಯಾತಕೆ ನಮೋ ರಂಗವಿಠಲಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭವವೆಂಬ ಅಡವಿಯಲ್ಲಿ ತಾಪತ್ರಯದಲ್ಲಿ ಸಿಲುಕಿ

ಭವವೆಂಬ ಅಡವಿಯಲ್ಲಿ ತಾಪತ್ರಯದಲ್ಲಿ ಸಿಲುಕಿ ಭಯಗೊಳ್ಳದಂತೆ ಗೆಲ್ಲುವುದಕೆ ಶ್ರೀಹರಿನಾಮ ಹೊರತಾಗಿ ಮತ್ತುಂಟೆ ಎನ್ನ ಮನವ ನಿನ್ನ ಚರಣದಲ್ಲಿಟ್ಟು ಸಲಹೊ ನಮೋ ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಮಗನ ಲೀಲೆಯ ತಾಳಲಾರೆವೆ

(ಕುರಂಜಿ ರಾಗ ಆದಿತಾಳ) ನಿನ್ನ ಮಗನ ಲೀಲೆಯ ತಾಳಲಾರೆವೆ ನಾವು ತರಳನ ದುಡುಕು ಹೇಳಬಾರದೆ ಗೋಪಾಲಕೃಷ್ಣಗೆ ಬುದ್ಧಿ ಅಮ್ಮ ||ಪ|| ಇದು ಚೆನ್ನಾಯಿತು ತಿಳಿದವನಲ್ಲವೆ ನೀ ಕೇಳೆ ಯಶೋದೆ ||ಅ.ಪ|| ಬಾಲಕನೆಂದು ಲಾಲಿಸಿ ಕರೆದರೆ ಮೂಲೆ ಮನೆಯೊಳಗೆ ಪೊಕ್ಕು ಪಾಲು ಬೆಣ್ಣೆ ಮೊಸರೆಲ್ಲವ ಮೆದ್ದು ಕೋಲಲಿ ನೀರೆ ಕೊಡವ ಒಡೆದನೇ ಆಸಲ (?) ವರ್ಣನವ ದಿಟ್ಟ ನಿತ್ಯಾ ಇವನ ಹೋರಾಟ ಹೆಬ್ಬಾಲೆಯರಲ್ಲಿ ನೋಟ ಬಹಳ ಬಗೆಯಲಿ ಪಿಡಿದೇವೆಂದರೆ ಮೇಲಿಯಂಜಲುಗಳವೋಡಿದಾ (?) ಅಮ್ಮ ಇದು ಚೆನ್ನಾಯಿತು ||೧|| ಮತ್ತೆ ಭಾಮಿನಿಯರೆಲ್ಲರು ಕೂಡಿ ಮಡುವಿನಲ್ಲಿ ಜಲಕ್ರೀಡೆಯಾಡಿರಲು ಚಿತ್ತಚೋರ ಸೀರೆಗಳನೆಲ್ಲವ- ನೆತ್ತಿಕೊಂಡು ಮರನನೇರಿದನವ್ವಾ ಬೆತ್ತಲೆ ಭಾಮೆಯರೆಲ್ಲ ಬೇಡಿದರೆ ಕೊಡನಲ್ಲ ಈ ಯುಕ್ತಿಗಳೆ ಬಹುಬಲ್ಲ ಹತ್ತಿಲಿ ಬಂದು ಕರವೆತ್ತಿ ಮುಗಿದರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಪೂಜೆ ಹೊರತಿಲ್ಲ ಎನ್ನ ವ್ಯಾಪಾರವೆಲ್ಲ

( ತೋಡಿ ರಾಗ ಆದಿತಾಳ) ನಿನ್ನ ಪೂಜೆಯೊ - ರಾಮ ||ಪ|| ನಿನ್ನ ಪೂಜೆ ಹೊರತಿಲ್ಲ ಎನ್ನ ವ್ಯಾಪಾರವೆಲ್ಲ ||ಅ.ಪ|| ಸ್ನಾನ ಸಂಧ್ಯಾವಂದನ ಹೋಮ ಮೌನ ಜಪ ಸದ್ಗ್ರಂಧ್ಯ ( ಸದ್ಗ್ರಂಥ?) ವ್ಯಾ- ಖ್ಯಾನ ಯಜ್ಞ ಸಾಧನ ಸಂಪಾದನ ಅಧ್ಯಯನ ನಾನಾರಸ ನೈವೇದ್ಯ ಭೋಜನ ತಾಂಬೂಲಚರ್ವಣ ಮಾನಿನಿ ಮೊದಲಾದ ಚಂದನ (ಸ್ಯಂದನ) ಗಾನದ ಭೋಗಗಳೆಲ್ಲ ||೧|| ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಳಿಗೆ ಸರ್ವಚೇಷ್ಟಾಪ್ರದನಾದ ಪ್ರಾಣಗೆ ನಿರ್ವಾಹಕನಾಗಿ ಸರ್ವಜೀವರ ಕೈಯಿಂದ ಸರ್ವಜ್ಞಾನ ಕರ್ಮಗಳನು ಸರ್ವದಾ ಮಾಡಿಸಿ ಅವರ ಸರ್ವಶುಭಭೋಕ್ತನಹೆ ||೨|| ಅಂಗಾಂಗಗಳಲ್ಲಿ ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿ ಉಂಗುಷ್ಟದಿ ಲೋಕಪಾವನೆ ಗಂಗಾದೇವಿಯು ಹಿಂಗದೆ ನಿನ್ನಲ್ಲಿರಲು ತುಂಗಗುಣ ಪರಿಪೂರ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತುರುಗಾಯ ಬಂದ ಗೋಪಿಯ ಕಂದ ಆನಂದದಿಂದ

(ಮೋಹನ ರಾಗ ಆದಿತಾಳ) ತುರುಗಾಯ ಬಂದ ಗೋಪಿಯ ಕಂದ ಆನಂದದಿಂದ ||ಪ|| ಸುರ ನರ ತರು ಮೃಗ ಜಲಚರ ಮೋಹಿಸೆ ತರಳೇರ ಮನಸೂರೆಯಾಗೆ ಕೊಳಲಿಂದ ||ಅ.ಪ|| ತಂದೆಯ ಕಂದನೆಂದು ಕೊಂಕುಳೊಳಿಟ್ಟು ಕಂದನ ಕೆಳಗಿಟ್ಟು ಅಂದುಗೆ ಗೆಜ್ಜೆ ಕಿವಿಗಳಿಗಿಟ್ಟು ಮುತ್ತಿನ ಬಟ್ಟು ಹೊಂದಿಸಿ ಗಲ್ಲದಲಿ ತಾನಿಟ್ಟು ಕಸ್ತೂರಿಯ ಬಟ್ಟು ಮುಂದಾಗಿ ಮೂಗಿನ ಮೇಲಳವಟ್ಟು ಮನೆಬಾಗಿಲ ಬಿಟ್ಟು ಕಂದರ್ಪನ ಶರದಿಂದ ನೊಂದು ಬಹು ಕಂದಿಕುಂದುತಲಿಂದುವದನೆಯರು ಇಂದಿರೇಶನಾನಂದದ ಗಾನಕೆ ಚಂದ್ರಮುಖಿಯರೊಂದಾಗುತ ಬರುತಿರೆ ||೧|| ಮುರಳಿಯ ಸ್ವರಕೆ ಮೋಹಿತರಾಗೆ ಕರುಗಳನು ತಂದು ಕರದಿಂದಲೆತ್ತಿ ತೊಟ್ಟಿಲೊಳಗೆ ಇರಿಸುತ್ತ ಹಾಲ ಬೆರೆಸುತ್ತ ಮಜ್ಜಿಗೆ ಮೊಸರಿನೊಳಗೆ ಪರಮಾತ್ಮನ ನೆನೆದು ಹೊರಟರು ಬಿಸಿಲು ಚಳಿ ಮಳೆಯೊಳಗೆ ಮನೆಮನೆಯೊಳಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಿಂತೆಯನು ಮಾಡದಿರು ಚದುರೆ

(ಮೋಹನರಾಗ ಝಂಪೆತಾಳ) ಚಿಂತೆಯನು ಮಾಡದಿರು ಚದುರೆ ನಿನಗೆ ನಾನು ಕಂತುಪಿತನನು ತೋರುವೆ ||ಪ|| ಸಂತೋಷದಿಂದ ಸರ್ವಾಭರಣವಿಟ್ಟುಕೊಂಡು ನಿಂತು ಬಾಗಿಲೊಳು ನೋಡೆ ಪಾಡೆ ||ಅ.ಪ|| ಒಂದು ಕ್ಷಣ ಪಾದಾರವಿಂದ ತೊಳೆದು ಕುಡಿದು ಮಂದಹಾಸದಲಿ ನಲಿದು ಒಂದೆ ಮನದಲಿ ದಿವ್ಯಗಂಧವನು ತಂದ್ಹಚ್ಚಿ ನಂದದಿಂದವನ ಮೆಚ್ಚಿ ಅಂದವಾದ ಕುಸುಮಹಾರವನು ಸುಖನಿಧಿಗೆ ಕಂಧರದಿ ನೀಡಿ ನೋಡಿ ಸಂದೇಹ ಬಿಟ್ಟು ಬಿಗಿದಪ್ಪಿ ಮನವೊಂದಾಗಿ ಎಂದೆಂದಿಗಗಲದಿರೆನ್ನೆ ರನ್ನೆ ||೧|| ಆಸನವ ಕೊಟ್ಟು ಕಮಲಾಸನನ ಪಿತಗೆ ಸವಿ- ಯೂಟಗಳನುಣ್ಣಿಸಿ ಲೇಸಾಗಿ ತಾಂಬೂಲ ತಬಕದಲಿ ತಂದಿಟ್ಟು ವಾಸನೆಗಳನೆ ತೊಟ್ಟು ಸೂಸುವ ಸುಳಿಗುರುಳುಗಳ ತಿದ್ದುತಲಿ ನಕ್ಕು ಶ್ರೀಶನ್ನ ಮರೆಯ ಹೊಕ್ಕು ಆ ಸಮಯದಲಿ ನಿನಗೆ ದಾಸಿ ಎನ್ನಯ ಮನದಿ ವಾಸವಾಗು ಬಿಡದೆ ಎನ್ನೆ ರನ್ನೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುಮ್ಮ ಬಂದನೆಲೊ ದುರ್ಜನ ಬೇಡ ಸುಮ್ಮನಿರೆಲೊ ರಂಗಯ್ಯ

(ಆಹರಿ ರಾಗ ತ್ರಿಪುಟ ತಾಳ) ಗುಮ್ಮ ಬಂದನೆಲೊ ದುರ್ಜನ ಬೇಡ ಸುಮ್ಮನಿರೆಲೊ ರಂಗಯ್ಯ ||ಧ್ರುವ|| ಉಟ್ಟ ಪುಲಿತೊವಲು ತೊಟ್ಟ ಮುತ್ತಿನ ಹಾರ ಇಟ್ಟ ಕಾಮಾಕ್ಷಿ ಕಪಾಲ ತ್ರಿಶೂಲ ಬಟ್ಟು ಹಣೆಮೆರಿಯ(ರೆಯೆ?) ಚರಣದಲಿ ಮೆಟಿದ ಹಾವುಗೆಯ ದಿಟ್ಟ ಮೂರುತಿ ನಿಮ್ಮ ಚರಣ ಸೇವೆಗೆ ನಿತ್ಯ ||೧|| ಕಡಗ ಕಂಕಣ ಬಾಹುಪುರಿ ಭುಜಕೀರ್ತಿಯು ಉರದಲಿ ಧರಿಸಿದ ರುಂಡಮಾಲಿಯು ತನ್ನ ಸಿರದ ಜಟಾಜೂಟೆಯು ತಾಂ ಧರಿಸಿದ ಉರಗನಾ- ಭರಣಗಳು ಪರಮಮೂರುತಿ ನಿಮ್ಮ ಚರಣಸೇವೆಗೆ ನಿತ್ಯ ||೨|| ಕಾಮನ್ನ ರೂಪಕ್ಕೆ ಜರಿವ ಚನ್ನಿಗನಾಗಿ ಕೋಮಲಾಂಗೇರು ಭಿಕ್ಷವ ನೀಡಲು ಪ್ರೇಮದಿಂದವರಿಗೆಲ್ಲ ಮುಕ್ತಿಯನೀವ ಸೋಮಶೇಖರನ ಚೆಲ್ವ ರಾಮನಾ ಭಾವ ಮೃದುವಾಕ್ಯವಿದು ಮುದ್ದು ||೩|| ಕೋಟಿ ಸೂರ್ಯರ ಕಾಂತಿ ನೀಟಾದ ತನುವಿನ ಪೂಸಿದ ಭಸ್ಮವು ನೊಸಲ ಮುಕ್ಕಣ್ಣಿನ ನೋಟದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೀರ್ತಿಸಿ ಜನರೆಲ್ಲ ಹರಿಯ ಗುಣ

(ರಾಗ ಸುರಟಿ, ಆದಿತಾಳ) ಕೀರ್ತಿಸಿ ಜನರೆಲ್ಲ ಹರಿಯ ಗುಣ ||ಪ|| ಕೀರ್ತಿಸಿ ಜನರು ಕೃತಾರ್ಥರಾಗಿರೊ ||ಅ.ಪ|| ಅವನು ವನದೊಳಗೆ ನಿತ್ಯದಿ ಬಾಹ ಜನರ ಬಡಿದು ಜೀವನ ಮಾಳ್ಪ ಕಿರಾತನು ಕೀರ್ತಿಸೆ ತಾ ಒಲಿದಾತನ ಕೋವಿದನೆನಿಸಿದ ||೧|| ಅವನ ಪಾದರಜ ಸೋಕಲು ಆ ವನಿತೆಯ ಜಡ ಭಾವನ ತೊಲಗಿಸಿ ಆ ವನಿತೆಯನು ಪಾವನ ಮಾಡಿದ ದೇವಾಧಿದೇವನ ||೨|| ಅಂದು ಶಬರಿ ತಾನು ಪ್ರೇಮದಿ ತಿಂದ ಫಲವ ಕೊಡಲು ಕುಂದು ನೋಡದೆ ಆನಂದದಿ ಗ್ರಹಿಸಿ ಕುಂದದ ಪದವಿಯನಂದು ಕೊಟ್ಟವನ ||೩|| ದುಷ್ಟರಾವಣ ತಾನು ಸುರರಿಗೆ ಕಷ್ಟಬಡಿಸುತಿರಲು ಪುಟ್ಟಿ ಭುವನದೊಳು ಕುಟ್ಟಿ ಖಳರ ಸುರ- ರಿಷ್ಟವ ಸಲಿಸಿದ ಸೃಷ್ಟಿಗೊಡೆಯನ ||೪|| ತನ್ನ ನಂಬಿದ ಜನರ ಮತ್ತೆ ತಾ- ನನ್ಯರಿಗೊಪ್ಪಿಸದೆ ಮುನ್ನಿನಘವ ಕಳೆದಿನ್ನು ಕಾಪಾಡುವ ಘನ್ನಮಹಿಮ ಶ್ರೀರಂಗವಿಠಲನ್ನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಬಳಿಯ ಬುತ್ತಿಯಲಿ ಕಸವನಾರಿಸುವರುಂಟೆ

(ಪುನ್ನಾಗವರಾಳಿ ರಾಗ) ಕಂಬಳಿಯ ಬುತ್ತಿಯಲಿ ಕಸವನಾರಿಸುವರುಂಟೆ(?) ಅಂಬುಜೋದರನ ನೆಲೆ ಅರಿಯದ ದುರಾತುಮರು ಬೆಂಬಿಡದೆ ಸುಖವನರಸುವರುಂಟೆ? ಉದ- ರಂಭರದಿ ಡಂಭಕರು ಇಹಪರಕೆ ಬಾಹ್ಯರೆಂದೂ ಶಂಬರಾಂತಕ ಪಿತ ರಂಗವಿಠಲರೇಯನ್ನ ಪಾ- ದಾಂಬುಜೋದ್ಭ್ರಮರದೊಳು(?) ಮಿಗೆ ದೂರರಾದವರು ಬೆಂಬಿಡದೆ ಸುಖವನರಸುವರುಂಟೆ?
ದಾಸ ಸಾಹಿತ್ಯ ಪ್ರಕಾರ
ಬರೆದವರು