ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಅವರೇ ಕಾಯ್ ಬೇಕು ಕಾಲದಿ

ಅವರೇ ಕಾಯ್ ಬೇಕು ಕಾಲದಿ ಅವರೇ ಕಾಯ್ ಬೇಕು ||ಪ|| ಅವರೆ ಬಹುರುಚಿಯವರೆ ಸಂಪದ ಅವರಿಂದಲಿ ಮೋಕ್ಷಾದಿ ಸಾಧನವು ||ಅ|| ಯುಕ್ತರಾಗಿ ಇರುವ ಜನರಿಗೆ ಭುಕ್ತಿಯನು ಕೊಡುವ ಭಕ್ತರಿಗೆಲ್ಲಾ ಬಾಯ್ಸವಿಯಾದ ಸಕ್ತಿಪುಟ್ಟಿಸುವ ಸರ್ವೋತ್ತಮವಾದ ||೧|| ಇವರೆಲ್ಲ ಅಳೆದು ಬಿತ್ತಿ ವಿವರವಾಗಿ ಅಳೆದು ತವಕದಿ ಮೂಟೆಯ ಕಟ್ಟಿಟ್ಟಿದ್ದರೆ ಜವನವರೆಳೆಯುವ ಕಾಲಕ್ಕೊದಗುತ ||೨|| ಹಿತರಾಗಿ ಅವರೆ ಮಾತಾ- ಪಿತರಾಗೀ ಅವರೆ ಗತಿದಾಯಕರಾಗಿ ಅವರೆ ಭೂ- ಸುತೆ ಗುರುರಾಮವಿಠಲರೀರ್ವರು ||೩|| --- ರಚನೆ:-ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಹುದೋ ಹನುಮಂತ ನೀನಹುದೊ ಬಲವಂತ

ಅಹುದೋ ಹನುಮಂತ ನೀನಹುದೊ ಬಲವಂತ ನೀನಹುದೋ ಮುಖ್ಯಪ್ರಾಣ ಮೂಲಗುರು ಅಹುದೊ ||ಪ|| ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆ ಅಹುದೊ ಮಧ್ವಮತಕೆ ಬಿರುದು ನೀ ಅಹುದೊ ||ಅ.ಪ|| ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನು ಸಂಜೀವನವ ತಂದ್ಯೊ ಸಕಲ ಕಪಿಗಳಿಗೆ ಮಂಜುಭಾಷಣ ನೀನು ಶರಧಿಯನು ದಾಟಿದೆಯೊ ಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ ||೧|| ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನು ಪಂಥವನಾಡಿ ದಾಯಾದಿಯರೊಡನೆ ಕಂತುಪಿತನ ಕೂಡಿ ಕೌರವರನ ಗೆಲಿದ್ಯೊ ಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ ||೨|| ಮಧ್ವಾವತಾರದಲಿ ಮುನಿವೇಷವನು ತಾಳಿ ಅದ್ವೈತವೆಂಬೊ ಅರಣ್ಯವನು ತರಿದೆ ಮಧ್ವಶಾಸ್ತ್ರವೆಂಬೊ ಮತವ ನಿರ್ಣೈಸಿದೆ ಮುದ್ದು ಹಯವದನದಾಸ ನೀನಹುದೊ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇ ನಮ್ಮ ವೃತ್ತಿ ಸದ್ಗುರು ಭಾವಭಕ್ತಿ

( ಪಹಾಡಿ ರಾಗ ಕೇರವಾ ತಾಳ) ಇದೇ ನಮ್ಮ ವೃತ್ತಿ ಸದ್ಗುರು ಭಾವಭಕ್ತಿ ||ಧ್ರುವ|| ಇದೇ ನಮ್ಮ ಮನೆಯು ಸದ್ಗುರು ಸ್ಮರಣೆಯು ಇದೇ ನಮ್ಮ ವರ್ತನೆಯು ಸದ್ಗುರು ಪ್ರಾರ್ಥನೆಯು ||೧|| ಇದೇ ನಮ್ಮ ಗ್ರಾಮ ಸದ್ಗುರು ದಿವ್ಯನಾಮ ಇದೇ ನಮ್ಮ ಸ್ತೋಮ ಸದ್ಗುರು ಆತ್ಮಾರಾಮ ||೨|| ಇದೇ ನಮ್ಮ ಭೂಮಿ ಸದ್ಗುರು ಘನಸ್ವಾಮಿ ಇದೇ ನಮ್ಮ ಸೀಮಿ ಸದ್ಗುರು ಅಂತರ್ಯಾಮಿ ||೩|| ಇದೇ ನಮ್ಮ ದೇಶ ಸದ್ಗುರು ಉಪದೇಶ ಇದೇ ನಮ್ಮಭ್ಯಾಸ ಸದ್ಗುರು ಜಗದೀಶ ||೪|| ಇದೇ ನಮ್ಮ ವಾಸ ಸದ್ಗುರು ಸಮರಸ ಇದೇ ನಮ್ಮ ಗ್ರಾಸ ಸದ್ಗುರು ಪ್ರೇಮರಸ ||೫|| ಇದೇ ನಮ್ಮ ವ್ಯಸನ ಸದ್ಗುರು ನಿಜಧ್ಯಾಸ ಇದೇ ನಮ್ಮ ಆಶೆ ಸದ್ಗುರು ಸುಪ್ರಕಾಶ ||೬|| ಇದೇ ನಮ್ಮಾಶ್ರಮ ಸದ್ಗುರು ನಿಜೋತ್ತಮ ಇದೇ ನಮ್ಮುದ್ಯಮ ಸದ್ಗುರು ಸಮಾಗಮ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳ ಮಂಗಳ ಜಯಮಂಗಳ

(ಭೈರವಿ ರಾಗ ತೀನ್ ತಾಳ) ಮಂಗಳ ಮಂಗಳ ಜಯಮಂಗಳಾ , ಶುಭ- ಮಂಗಳ ಸ್ವಾಮಿ ಸರ್ವೋತ್ತಮಗೆ ಸಹಸ್ರ ಮಂಗಳ ದೇವೋತ್ತಮಗೆ ||ಪ|| ಕೇಶವ ನಾರಾಯಣಗೆ ಮಂಗಳ ವಾಸುದೇವ ಸುತ ಶ್ರೀಕೃಷ್ಣಗೆ ಮಂಗಳ ಹೃಷಿಕೇಶ ಪುರುಷೋತ್ತಮಗೆ ಮಂಗಳ ವಸುದೇವಸುತ ಶ್ರೀಕೃಷ್ಣಗೆ ಮಂಗಳ ||೧|| ಅಚ್ಯುತ ಜನಾರ್ದನಗೆ ಮಂಗಳ ಮತ್ಸ್ಯಕೂರ್ಮವರಾಹಗೆ ಮಂಗಳ ಸಚ್ಚಿದಾನಂದ ಶ್ರೀಧರಗೆ ಮಂಗಳ ಮುಚಕುಂದ ವರದ ವಿಷ್ಣುಗೆ ಮಂಗಳ ||೨|| ಮಾಧವ ಮಧುಸೂಧನಗೆ ಮಂಗಳ ಸಾಧು ಹೃದಯವಾಸಗೆ ಮಂಗಳ ಅಧೋಕ್ಷಜ ಅನಿರುದ್ಧಗೆ ಮಂಗಳ ಪದ್ಮನಾಭ ಪ್ರದ್ಯುಮ್ನಗೆ ಮಂಗಳ ||೩|| ಗರುಡವಾಹನ ಗೋವಿಂದಗೆ ಮಂಗಳ ಉರಗಶಯನ ಉಪೇಂದ್ರಗೆ ಮಂಗಳ ಹರಿ ದಾಮೋದರ ಸಮ್ಕರುಷಣಗೆ ಮಂಗಳ ನಾರಸಿಂಹ ತ್ರಿವಿಕ್ರಮಗೆ ಮಂಗಳ ||೪|| ಪರಮಪಾವನ ಭಾರ್ಗವಗೆ ಮಂಗಳ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯ ಜಯ ಕರುಣಾಕರ ಕೃಪಾಲ

(ಯಮನ್ ರಾಗ ತೀನ್ ತಾಲ್) ಜಯ ಜಯ ಕರುಣಾಕರ ಕೃಪಾಲ ಜಯ ಜಯ ಗುರುಮುನಿಜನ ಪ್ರತಿಪಾಲ ||ಧ್ರುವ|| ರಾಜತೇಜೋನಿಧಿ ರಾಜರಾಜೇಂದ್ರ ರಾಜಿಸುತಿಹ ಮಕುಟಮಣಿ ಸುರೇಂದ್ರ ಸುಜನಹೃದಯ ಸದ್ಗುಣಮಣಿ ಸಾಂದ್ರ ಅಜಸುತ ಸೇವಿತ ಸುಜ್ಞಾನ ಸುಮೋದ ||೧|| ಅಗಣಿತಗುಣ ಅಗಾಧ ಅಪಾರ ನಿಗಮಗೋಚರ ನಿರುಪಮ ನಿರ್ಧಾರ ಸಗುಣ ನಿರ್ಗುಣನಹುದೋ ಸಾಕ್ಷಾತ್ಕಾರ ಭಕ್ತವತ್ಸಲ ಮುನಿಜನ ಮಂದಾರ ||೨|| ಧೀರ ಉದಾರ ದಯಾನಿಧಿಪೂರ್ಣ ತಾರಕಸ್ವಾಮಿ ಸದ್ಗುರು ನಿಧಾನ ತರಳ ಮಹಿಪತಿ ಜನೋದ್ಧರಣ ಚರಣಸ್ಮರಣಿ ನಿಮ್ಮ ಸಕಲಾಭರಣ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು