ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ

(ಕಾಫಿ ರಾಗ ತೀನ್ ತಾಳ) ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ ದೊರಕುವದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲ ||ಧ್ರುವ|| ಗುರುಕರುಣಕೃಪೆಯಿಂದ ಪರಮದಿವ್ಯಾಮೃತವು ಸುರಿಸುರಿದು ಚಪ್ಪರಿದು ಸೂರ್ಯಾಡಿ ಸಾರಸವ ||೧|| ಅನುದಿನ ಸೇವಿಸುವ ಅನುಭವಿಗಳೂಟ ಏನೆಂದುಸುರಲಿ ನಾ ಅನಂದೋಬ್ರಹ್ಮವಾ ||೨|| ಎಂದಿಗೆ ಬಾಹುದು ನೋಡಿ ಸಂದಿಸಿ ಮಾನವಜನ್ಮ ಚಂದ ಮಾಡಿಕೊಳ್ಳಿರೊ ಬಂದ ಕೈಯಲಿ ಬ್ಯಾಗ ||೩|| ಆಲಸ್ಯಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ ಸುಲಲಿತವಾಗಿಹುದು ತಿಳಿದುಕೊಂಬವರಿಗೆ ||೪|| ಇರುಳ್ಹಗಲ ಪೂರ್ಣ ಸುರುವುತಿಹ ಅಮೃತ ತರಳ ಮಹಿಪತಿ ಪ್ರಾಣ ಹೊರೆವ ಸಂಜೀವನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯೊ ಕರುಣಾನಂದ ಶ್ರೀಗುರು

(ಕೇದಾರ ರಾಗ ಝಪ್ ತಾಳ) ಕಾಯೊ ಕರುಣಾನಂದ ಶ್ರೀಗುರು ಕಾಯೊ ಗುರು ಕೃಪಾನಿಧೆ ಕಾಯೊ ಕರುಣಿಸಿ ಎನ್ನ ಪೂರ್ಣ ನೀ ಕಾಯೊ ಪರಮನಿಧೆ ||ಧ್ರುವ|| ತೊಡಿಸಿ ಕರುಣಾನಂದ ಕವಚವ ಇಡಿಸೊ ಭಕುತಿವೈರಾಗ್ಯವ ದೃಢಗೊಳಿಸು ಜ್ಞಾನಪೂರ್ಣ ನೀ ಕಡಿಸೊ ಕಾಮಕ್ರೋಧವ ನಡೆಸಿ ನಿತ್ಯ ವಿವೇಕಪಥದಲಿ ಕೂಡಿಸೊ ನಿಜ ಸುಖಬೋಧವ ಬಿಡಿಸೊ ಭವಭಯ ಮೂಲದಿಂದಲಿ ಬಡಿಸೊ ಹರುಷಾನಂದವ ||೧|| ಹುಟ್ಟು ಹೊಂದುವ ಬಟ್ಟೆ ಮುರಹಿಸಿ ಕೊಟ್ಟು ಕಾಯೊ ಸತ್ಸಂಗವ ಗುಟ್ಟಿನೊಳು ನಿಜಘಟ್ಟಿಗೊಳಿಸಿ ನೀ ಮುಟ್ಟಿ ಮುದ್ರಿಸೊ ದೃಷ್ಟಾಂತವ ನಿಟಿಲನಯನ ಭ್ರೂಮಧ್ಯದೆರೆಸಿ ನೀ ಸಟೆಯ ಮಾಡೊ ಅವಿದ್ಯವ ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯದ ||೨|| ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರಯ್ಯಾ ಭಕ್ತವತ್ಸಲಾ

( ಭೈರವಿ ರಾಗ ತ್ರಿತಾಳ) ಬಾರಯ್ಯಾ ಭಕ್ತವತ್ಸಲಾ ಬಾರೋ ಶ್ರೀಹರಿಗೋಪಾಲಾ ಸಿರಿ ಸುಖಲೋಲಾ ||ಪ|| ಸಾಮಗಾಯನ ಪ್ರೀಯಾ ಸಮಸ್ತ ಲೋಕದ ಶ್ರೇಯಾ ನೇಮಿಸಿ ಬೀರೋ ಉದಯಾ ಸ್ವಾಮೀ ನಮ್ಮಯ್ಯಾ ||೧|| ಅನಾಥರನುಕೂಲಾ ಮುನಿಜನ ಪ್ರತಿಪಾಲಾ ಘನಸುಖದ ಕಲ್ಲೋಳಾ ದೀನದಯಾಳಾ ||೨|| ಮನಮಂದಿರದೊಳು ಅನುವಾಗಿ ಬಾಳು ದೀನ ಮಹಿಪತಿಗಾಳು ಘನವಾಗಿ ಕೇಳು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನವ ನಾನು ಎನ್ನಯ್ಯ ನೀನು

(ಭೈರವಿ ರಾಗ ತ್ರಿತಾಳ) ನಿನ್ನವ ನಾನು ಎನ್ನಯ್ಯ ನೀನು ನಿನ್ನಿಂ ನಾ ಎಂದೆಂಬೆ ನಾನು ||ಪ|| ನಿನ್ನೊಳು ದಾವ ನಾನು ಎನ್ನೊಳಗಿಹೆ ನೀನು ನಿನ್ನಿಂದೆ ಜೀವಿಸುವನಾಗಿಹೆನು ||೧|| ನಿನ್ನವಿಡಿದು ನಾನು ಎನ್ನ ಬಾಹ್ಯಾಂತ್ರ ನೀನು ಎನ್ನ ಸಕಲ ಸಾಹ್ಯಸೂತ್ರ ನೀನು ||೨|| ಎನ್ನ ಪ್ರೇರಕ ನೀನು ನಿನ್ನ ಪ್ರೀತ್ಯರ್ಥ ನಾನು ನಿನ್ನಿಂದಾದೆ ಪವಿತ್ರ ಪಾತ್ರ ನಾನು ||೩|| ನೀನೇ ಸ್ವಯಂಭಾನು ನಿನ್ನಿಂದುದಯ ನಾನು ನಿನ್ನಿಂದಾದ ಮಹಿಗೆ ಪತಿಯೇ ನೀನು ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೋಲು ಕೋಲೆನ್ನ ಕೋಲೆ (ದಶಾವತಾರ ಕೋಲಿನ ಪದ)

(ಮಾಂಡ್ ರಾಗ ಕೇರವಾ ತಾಳ) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲೆ ಶ್ರೀಗುರುವಿನಾ ಬಲಗೊಂಬೆ ಕೋಲೆ ||ಪ|| ಶಿಕ್ಷಿಸಿ ನಿಗಮಗೋಚರ ರಾಕ್ಷಸನಾ ಕೊಂದು ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು ಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧|| ಧರ್ಮ ನಡೆಯಲಾಗಿ ಮರ್ಮವ ತಾಳಿದ ಕರ್ಮಹರ ಶ್ರೀಮೂರ್ತಿಯ ಕೋಲೆ ಕರ್ಮಹರ ಶ್ರೀಮೂರ್ತಿಯು ಧರೆಯ ಪೊತ್ತ ಕೂರ್ಮಾವತಾನ ಬಲಗೊಂಬೆ ಕೋಲೆ ||೨|| ಧರೆಯ ಕದ್ದಸುರನಾ ಕೋರೆದಾಡಿಂದ ಸೀಳಿ ಹೋರಿಹೊಯಿದಾಡಿದ ನರಹರಿ ಕೋಲೆ ಹೋರಿಹೊಯಿದಾಡಿದ ನರಹರಿ ಧರೆಯಾ ಗೆದ್ದ ವರಹಾವತಾರನ ಬಲಗೊಂಬೆ ಕೋಲೆ ||೩|| ತರಳ ಪ್ರಹ್ಲಾದಗಾಗಿ ದುರುಳದೈತ್ಯನ ಕೊಂದು ಕರುಳ್ ವನಮಾಲೆಯ ಧರಿಸಿದ ಕೋಲೆ ಕರುಳ್ ವನಮಾಲೆಯ ಧರಿಸಿದಾ ಹರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉತ್ತಮೋತ್ತಮ ದೇವ ನೀನಿರಲಿಕ್ಕೆ

(ಬಾಗೇಶ್ರೀ ರಾಗ ಝಂಪೆತಾಳ) ಉತ್ತಮೋತ್ತಮ ದೇವ ನೀನಿರಲಿಕ್ಕೆ ಮತ್ತೆ ಅನ್ಯದೇವನಾರಿಸಲೇತಕೆ ||ಧ್ರುವ|| ಸತ್ಯಸನಾತನನೆಂದು ಶ್ರುತಿ ಸಾರುತಿರಲಿಕ್ಕೆ ಚಿತ್ತ ಚಂಚಲವಾಗುವ ಸಂದೇಹವ್ಯಾತಕೆ ಎತ್ತ ನೋಡಿದರತ್ತ ಪ್ರತ್ಯಕ್ಷ ನೀದೋರಲಿಕ್ಕೆ ಮತ್ತೆ ಆಹ್ವಾನ ವಿಸರ್ಜನವೇತಕೆ ||೧|| ವಾಸವಾಗಿ ಎನ್ನಾತ್ಮದೊಳು ನೀನೆ ಇರಲಿಕ್ಕೆ ದೇಶದೇಶವನೆ ಶೋಧಿಸುವದೇತಕೆ ವಾಸುದೇವನೆ ನೀನೆ ಎನ್ನ ಈಶನಾಗಿರಲಿಕ್ಕೆ ಸೋಸಿಲನೇಕ ವೇಷದೋರುವದೇತಕೆ ||೨|| ಭಾನುಕೋಟಿತೇಜ ಎನ್ನೊಡೆಯನಾಗಿರಲಿಕ್ಕೆ ಬಿನುಗುದೈವದ್ಹಂಗು ತಾ ಇನ್ನೊಂದೇತಕೆ ಮನದ ಮಂಗಳಾಗಿ ನೀ ಮಹಿಪತಿಗೆ ಭಾಸುತಿರಲಿಕ್ಕೆ ಅನುಭವಕೆ ಅನುಮಾನಬಡುವದೇತಕೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನಹುದೊ ಘನಮಹಿಮ ಮುನಿಜನರೊಡೆಯ

( ಪಟದೀಪ ರಾಗ , ಝಂಪೆತಾಳ) ನೀನಹುದೊ ಘನಮಹಿಮ ಮುನಿಜನರೊಡೆಯ ಪೂರ್ಣ ದೀನದಯಾಳು ನೀನೆ ಹರಿಯೆ ||೧|| ಪತಿತಪಾವನನೆಂದು ಶ್ರುತಿ ಸಾರುವುದು ಕೇಳಿ ಅತಿ ಹರುಷದಿಂದಲಿ ಬಂದೆನೊ ಹರಿಯೆ ||೨|| ಮತಿಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವುದು ಎನಗೆ ಹರಿಯೆ ||೩|| ಮೊರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ ||೪|| ಅರಿಯೆ ನಾ ನಿಮ್ಮ ಏನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ ||೫|| ಶರಣಾಗತರ ಹೊರೆವ ಬಿರುದು ನಿಮ್ಮದು ಪೂರ್ಣ ಸಾರುವುದ ತಿಳಕೊಳಲೊಲ್ಲೆ ಹರಿಯೆ ||೬|| ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ ||೭|| ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ

(ಭೈರವಿ ರಾಗ ತೀನ್ ತಾಳ) ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ||ಧ್ರುವ|| ಎಲ್ಲದೋರ್ವದು ಮರೆದು ಎಲ್ಲರೊಳಗಿಹದರಿದು ಎಲ್ಲರೊಳಗೆಲ್ಲ ತಾನಾಗಬೇಕು ಎಲ್ಲರೊಳಗೆಲ್ಲ ತಾನಾಗಿ ಎಲ್ಲ ತನ್ನೊಳಗಾಗಿ ಬೆಲ್ಲ ಸವಿದ ಮೂಕನಂತಾಗಬೇಕು ||೧|| ಬಲ್ಲತನವನು ನೀಡಿ ಬಲ್ಲನೆ ತಾನಾಗಿ ಬಲ್ಲರಿಯನೆಂಬುದು ಈಡ್ಯಾಡಬೇಕು ಬಲ್ಲರಿಯದೊಳಗಿದ್ದನೆಲ್ಲ ತಿಳಕೊಳ್ಳಬೇಕು ಸೊಲ್ಲಲ್ಹೇಳುವ ಸೊಬಗ ಬೀರದಿರಬೇಕು ||೨|| ಸೋಹ್ಯ ಸೂತ್ರವ ತಿಳಿದು ಬಾಹ್ಯರಂಜನಿ ಮರೆದು ದೇಹವಿದೇಹದಲಿ ಬಾಳಬೇಕು ಮಹಿಗೆ ಮಹಿಪತಿಯಾಗಿ ಸದ್ಗುರುವಾದ ಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಿರುದು ದಾರದು ಗೋವಿಂದಾ

(ಸಾರಂಗ ರಾಗ ದೀಪಚಂದಿ ತಾಳ) ಬಿರುದು ದಾರದು ಗೋವಿಂದಾ ಅರಿತು ನೋಡಯ್ಯಾ ಶ್ರೀ ಹರಿಮುಕುಂದಾ ||ಪ|| ಪತಿಯಾ ಕಣ್ಣಿನ ಮುಂದೆಳೆಯಲು ಸತಿಯಾ ಗತಿಗಾತಿಹುದು ದಾರಿಗೆ ಕೊರತಿಯಾ ||೧|| ಒಡೆಯನಾ ಮುಂದ ಬಂಟಗಾಗಿರೆ ಕುಂದು ಒಡನೆ ಬೀಳುದು ತೊಡಕಾರಿಗೆ ಬಂದು ||೨|| ನಿನ್ನವನೆನಿಸಿ ಮಹಿಪತಿಗೆ ಪೂರ್ಣಾ ಇನ್ನಾರಿಸುವರೆ ಎನ್ನವಗುಣಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯೋ ಕಾಯೋ ಕರುಣಾಕರ ಗೋವಿಂದಾ

( ಯಮನ್ ರಾಗ ತ್ರಿತಾಳ) ಕಾಯೋ ಕಾಯೋ ಕರುಣಾಕರ ಗೋವಿಂದಾ ಕಾಯೋ ನಮ್ಮ ಕೃಪಾಸಿಂಧು ಹರಿ ಮುಕುಂದಾ ||ಪ|| ಬೊಮ್ಮನ ಪಡದಾ ಪರಾಪರ ಧೊರಿಯೇ ಸಮ್ಯಕ್ ಜ್ಞಾನವನಿತ್ತು ಕಾಯೋ ಮುರಾರಿಯೆ ನಿಮ್ಮ ವಿನಾ ಅನ್ಯ ಪಥವ ನಾನರಿಯೆ ನಮ್ಮ ದೈವಾ ನೀನಹುದೋ ನರಹರಿಯೇ ||೧|| ಭವಭಯದಾ ದುರಿತಾ ಪರಿಹರಿಸೋ ಭಾವಭಕ್ತ್ರಿಯೊಳು ಮನಾ ಪೂರ್ಣವಿರಿಸೋ ಕಾವ ಕರುಣನೆ ನಿಮ್ಮ ದಯ ಬೀರಿಸೋ ದಿವಾರಾತ್ರಿಯಲಿ ನಿಮ್ಮ ಸ್ಮರಣಿಲಿರಿಸೋ ||೨|| ಕಾಯೋ ಕಾಯೋ ಕೊಟ್ಟು ನಿಮ್ಮ ನಿಜ ಧ್ಯಾನವಾ ಕಾಯೋ ಕರುಣಿಸಿ ಎನ್ನ ಜೀವನವಾ ಕಾಯೋ ದಯದಿಂದ ಎನ್ನ ಅಭಿಮಾನವಾ ಕಾಯೋ ನಿಜದಾಸ ಮಹಿಪತಿ ಪ್ರಾಣವಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು