ವಾದಿರಾಜರ ಕೀರ್ತನೆಗಳು

ತಾಳುವಿಕೆಗಿಂತ ತಪವು ಇಲ್ಲ

ತಾಳುವಿಕೆಗಿಂತ ತಪವು ಇಲ್ಲ ಕೇಳಬಲ್ಲವರಿಗೆ ಹೇಳುವೆನು ಸೊಲ್ಲ| ದುಷ್ಟ ಮನುಜರು ಪೇಳ್ವ ನಿಷ್ಠುರದ ನುಡಿ ತಾಳು ಕಷ್ಟ ಬಂದರೆ ತಾಳು ಕಂಗೆಡದೆ ತಾಳು| ನೆಟ್ಟ ಸಸಿ ಫಲ ಬರುವ ತನಕ ಶಾಂತಿಯ ತಾಳು ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು|| ಹಳಿದು ಹಂಗಿಸುವಂಥ ಹಗೆಯ ಮಾತನು ತಾಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಭಜನೆ ಮಾಡೋ

ಹರಿ ಭಜನೆ ಮಾಡೋ ನಿರಂತರ |ಪ| ಪರಗತಿಗಿದು ನಿರ್ಧಾರ ನೋಡೊ |ಅ.ಪ| ಮೊದಲೆ ತೋರತದೆ ಮಧುರ ವಿಷಯ ಸುಖ ಕಡೆಯಲ್ಲಿ ದುಃಖ ಅನೇಕ| ವೇದಶಾಸ್ತ್ರಗಳನೋದಿದರೇನು ಸಾಧನೆಗಿದು ನಿರ್ಧಾರ| ಸಾರವೋ ಬಹು ಸಂಸಾರ ವಿಮೋಚಕ ಸೇರೋ ಹಯವದನನ್ನ|
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಿಡೆನು ಬಿಡೆನು ನಿನ್ನ

ಬಿಡೆನು ಬಿಡೆನು ನಿನ್ನ ಚರಣಕಮಲವ ಎನ್ನ |ಪ| ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ|ಅ.ಪ| ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವ ನಳಿನೋದ್ಭವ ಬಂದು ಪಾದವ ತೊಳೆಯೆ| ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ ಹರಿಪಾದ ತೀರ್ಥವೆಂದು ಹರ ಧರಿಸಿದನಾಗ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಂಜನೇಯನೆ ಅಮರವಂದಿತ

ಆಂಜನೇಯನೆ ಅಮರವಂದಿತ ಕಂಜನಾಭನ ದೂತನೆ |ಪ| ಸಂಜೀವಿನಿಯನು ತಂದು ಕಪಿಗಳ ನಂಜುಕಳೆದ ಪ್ರಖ್ಯಾತನೆ |ಅ.ಪ| ಕಾಮನಿಗ್ರಹನೆನಿಸಿ ಸುರರಭಿಮಾನ್ಯ ದೇವತೆ ಎನಿಸಿದೆ ರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ| ಸಿಂಧುಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥಾ ಪಾವನ ಪಾದವೊ ರಂಗಯ್ಯ

ಎಂಥಾ ಪಾವನ ಪಾದವೊ ರಂಗಯ್ಯ ಇನ್ನೆಂಥಾ ಚೆಲುವ ಪಾದವೊ |ಪ| ಎಂಥಾ ಪಾವನ ಪಾದ ಇಂತು ಜಗದಿ ಕೇಳು ಪಂಥದೊಳಿಹ ಕುರುಪತಿಯನುರುಳಿಸಿದಾ |ಅ.ಪ| ಹಲವು ಕಾಲಗಳಿಂದ ಮಾರ್ಗದಿ ಶಿಲೆ ಶಾಪ ಪಡೆದಿರಲು| ಒಲಿದು ರಜದಿ ಪಾವನಗೈದು ಕರುಣದಿ ಶಿಲೆಯ ಬಾಲೆಯ ಮಾಡಿ ಸಲಹಿದ ಹರಿಯ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ನಾರಾಯಣ ನಾರಾಯಣ

ನಾರಾಯಣ ನಾರಾಯಣ ನಾರಾಯಣ ||ಪ|| ನಳಿನೋದರ ನಾರದಪ್ರಿಯ ನಾಮ ಜಯ ನಾರಾಯಣ ನರಕಾಂತಕ||ಅ.ಪ|| ಸುರಸಂಚಯ ಸುಖಕಾರಣ ದಿತಿಜಾಂತಕ ದೀನಶರಣ| ಪರತ ಪರ ಪಾಂಡವಪ್ರಿಯ ಪರಿಪೂರ್ಣ ಜಯ|| ಅಘಕುಲವನದಾವಾನಲ ಅಗಣಿತ ಗುಣಗಣ ನಿರ್ಮಲ| ತ್ರಿಗುಣಾತೀತ ತ್ರಿಭುವನ ತ್ರಿದಶೇಶ್ವರವಂದ್ಯ ಜಯ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾರಿಯ ತೋರೋ ಗೋಪಾಲ

ದಾರಿಯ ತೋರೋ ಗೋಪಾಲ ವಾರಿಜನಾಭ ಶ್ರೀ ವೈಕುಂಠಲೋಲ| ಸಿಕ್ಕಿದೆ ಭವಪಾಶದೊಳಗೆ ಲೆಕ್ಕವಿಲ್ಲದ ಜಂತುಗಳಿಗೆ| ದಿಕ್ಕೊಬ್ಬರಿಲ್ಲವೋ ಎನಗೆ ಕಕ್ಕಸ ಕಳೆದು ನಿನ್ನಯ ಪಾದಗಳಿಗೆ|| ಗಜರಕ್ಷಕನು ನೀನೆಂದು ಅಜರುದ್ರಾದಿಗಳಂದು| ನಿಜವಾಗಿ ಪೇಳಿದರೆಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕುದುರೆ ಬಂದಿದೆ ಚೆಲುವ

ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ |ಪ| ವಾದಿರಾಜರಿಗೊಲಿದು ಬಂದು ಸ್ವಾದಿಪುರದಲ್ಲಿ ನಿಂದ|ಅ.ಪ| ಮುಂಗಾಲು ಕೆದರಿ ಕುಣಿವ ಕುದುರೆ ಹಿಂಗಾಲಿಲಸುರರ ಒದೆವ ಕುದುರೆ| ರಂಗನೆಂದರೆ ಸಲಹೊ ಕುದುರೆ ತುಂಗ ಹಯವದನ ಕುದುರೆ|| ಹಲ್ಲಣದೊಳಗೆ ನಿಲ್ಲದು ಕುದುರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ಮುದ್ದು ಕೃಷ್ಣನ

ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕು ಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ|| ಚೆಲುವ ಚರಣದ್ವಂದ್ವ ಜಂಘಜಾನೂರುಕಟಿ ವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ| ನಳಿತೋಳು ಮುದ್ದುಮುಖ ನಳಿನ ನಾಸಿಕ ಕರ್ಣ ಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲೋಕ ಭರಿತನೋ

ಲೋಕ ಭರಿತನೋ ರಂಗಾನೇಕ ಚರಿತನೊ ||ಪ|| ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ|| ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು- ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ| ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು