ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು

ಅಪ್ರಮೇಯ ಆದರಿಸೋ ಎನ್ನ


ಅಪ್ರಮೇಯ  ಆದರಿಸೋ ಎನ್ನ ||ಪ||
ಸ್ವಪ್ರಕಾಶಾನಂದರೂಪನೆ ||ಅ||

ಮುಪ್ಪುರಹರನುತ ಮುನಿಜನಸೇವಿತ
ತಪ್ಪುಗಳೆಣಿಸದೆ ದಾಸನೆಂತೆಂದು ||೧||

ನಿನ್ನದರುಶನದಿಂದಾ ಧನ್ಯರಾಗುವರು  ಜನರು
ಪುಣ್ಯವಂತರಾಗಿಹವರನ ಪಡೆವರು ||೨||

ಧಾರುಣಿಯೊಳಗೆ ಮಳೂರೊಳು ನೆಲಸಿದೆ
ಮಾರಜನಕ ಗುರುರಾಮವಿಠಲ ||೩||

--------ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಜನಾ ಸುಕುಮಾರನೆ

ಅಂಜನಾ ಸುಕುಮಾರನೆ ಭವ- ||ಪ||
ದಂಜಿಕೆ ಬಿಡಿಸು ಬೇಗ ಸಂಜೀವರಾಯನೆ ||ಅ.ಪ||

ವಾಯುಪುತ್ರಾ ವಜ್ರಗಾತುರ
ನೋಯುವೆ ನಾ ಸಂಸಾರದೊಳ್
ಕೈಯ ಪಿಡಿದೆತ್ತುವರಾರೈ ||೧||

ಗುರುವರೇಣ್ಯ ತವ ಪಾದಪಂ
ಕರುಹಯುಗವಾಶ್ರಯಿಪರ
ನೆರಲಿನೊಳಗಿಟ್ಟುಯನ್ನನು ||೨||

ಕ್ಷೇಮದಾತನೇ ಶ್ರೀ ಗುರು
ರಾಮವಿಠಲ ಕಿಂಕರ
ಭೂಮಿಜಾಶೋಕನಾಶನ ||೩||


--------ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು


 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅವರೇ ಕಾಯ್ ಬೇಕು ಕಾಲದಿ

ಅವರೇ ಕಾಯ್ ಬೇಕು ಕಾಲದಿ ಅವರೇ ಕಾಯ್ ಬೇಕು ||ಪ|| ಅವರೆ ಬಹುರುಚಿಯವರೆ ಸಂಪದ ಅವರಿಂದಲಿ ಮೋಕ್ಷಾದಿ ಸಾಧನವು ||ಅ|| ಯುಕ್ತರಾಗಿ ಇರುವ ಜನರಿಗೆ ಭುಕ್ತಿಯನು ಕೊಡುವ ಭಕ್ತರಿಗೆಲ್ಲಾ ಬಾಯ್ಸವಿಯಾದ ಸಕ್ತಿಪುಟ್ಟಿಸುವ ಸರ್ವೋತ್ತಮವಾದ ||೧|| ಇವರೆಲ್ಲ ಅಳೆದು ಬಿತ್ತಿ ವಿವರವಾಗಿ ಅಳೆದು ತವಕದಿ ಮೂಟೆಯ ಕಟ್ಟಿಟ್ಟಿದ್ದರೆ ಜವನವರೆಳೆಯುವ ಕಾಲಕ್ಕೊದಗುತ ||೨|| ಹಿತರಾಗಿ ಅವರೆ ಮಾತಾ- ಪಿತರಾಗೀ ಅವರೆ ಗತಿದಾಯಕರಾಗಿ ಅವರೆ ಭೂ- ಸುತೆ ಗುರುರಾಮವಿಠಲರೀರ್ವರು ||೩|| --- ರಚನೆ:-ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು