ಪ್ರಸನ್ನತೀರ್ಥರು

ತುಂಗ ಭುಜಂಗನ ಫಣೆಯಲಿ ಕುಣಿದನು

ತುಂಗ ಭುಜಂಗನ ಫಣೆಯಲಿ ಕುಣಿದನು ಮಂಗಳ ಮೂರುತಿ ರಂಗಾ|| ಗಿಣಿಗಿಣಿ ತಾಳ ಝೇಂಕರಿಸುವ ತಂಬೂರಿ ಗಣಗಣವೆಂಬೊ ಸುನಾದ ಮೃದಂಗವ ಝಣಿಝಣಿಸುವ ಗಂಜರಿ ನಾದಗಳನು ಅನುಕರಿಸುತ ದಿಕ್ಕಿಟದಿಕ್ಕಿಟ ಎಂದು|| ಗಗನವ ತುಂಬಿ ತುಂಬುರು ಗಂಧರ್ವರು ಶಹನ ಅಟಾಣ ಶಂಕರಾಭರಣಗಳಿಂದ ಸೊಗಸಿನಿಂದಲಿ ಗುಣಗಾನವ ಮಾಡಲು ನಗಧರ ಕೃಷ್ಣನು ನಗುಮೊಗದಿಂದಲಿ|| ಪನ್ನಗ ಸತಿಯರು ಚೆನ್ನಾದ ತವಕದಿ ಸನ್ನುತಿಸುತ ಆರತಿಯ ಬೆಳಗುತಿರೆ ಉನ್ನತ ಗಗನದಿ ಸುಮನಸರೆಲ್ಲ ಪ್ರಸನ್ನ ಹರಿಗೆ ಸುಮ ಮಳೆಗರೆಯುತಲಿರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧುರವು ಮಧುರನಾಥನ ನಾಮವು

ಮಧುರವು ಮಧುರನಾಥನ ನಾಮವು ದಧಿ ಮಧು ದ್ರಾಕ್ಷಾಸುಧೆರಸಗಳಿಗಿಂತ|| ಸುಂದರವದನನ ಅರವಿಂದ ನಯನನ ನಂದಕುಮಾರನ ಚೆಂದದ ನಾಮವು|| ಯದುಕುಲತಿಲಕನ ಸದಮಲ ಚರಿತನ ಮದನಪಿತನ ನಾಮ ಮುದದಲಿ ಪಾಡಲು|| ಗಾನವಿಲೋಲನ ದಾನವಕಾಲನ ಲೀಲೆಗಳನು ಸದಾ ಲಾಲಿಸಿ ಪೊಗಳಲು|| ಹೇಮವಸನನ ಕೋಮಲರೂಪನ ಭಾಮಕಾಂತನ ಪ್ರೇಮದ ನಾಮವು|| ಪನ್ನಗಶಯನನ ಚಿನ್ಮಯರೂಪನ ಸನ್ನುತಿಸಲಿಕೆ ಪ್ರಸನ್ನನ ನಾಮವು||
ದಾಸ ಸಾಹಿತ್ಯ ಪ್ರಕಾರ
ಬರೆದವರು