ಹೊಸ ಪರಿಯೇ ರಂಗ

ಹೊಸ ಪರಿಯೇ ರಂಗ

( ರಾಗ ಶಂಕರಾಭರಣ ಅಟತಾಳ) ಹೊಸ ಪರಿಯೇ ರಂಗ, ಹೊಸ ಪರಿಯೇ ಕೃಷ್ಣ ಶಶಿಧರವಂದ್ಯನೆ, ಕುಸುಮಜ ಜನಕನೆ || ತಮ್ಮಗೆ ನೀ ಮತ್ತೆ ತಮ್ಮನಾದೆ ರಂಗ, ತಮ್ಮನ ಮಗಳ ಮದುವ್ಯಾದೆ ಬ್ರಹ್ಮಗೆ ನೀ ಪರಬ್ರಹ್ಮನಾದೆ ರಂಗ, ನಿಮ್ಮಗಗೆ ಮೈದುನನಾದೆ || ಮಾವನ ಮಗಳ ಮದುವ್ಯಾದೆ ರಂಗ, ಮಾವಗೆ ಮತ್ತೆ ನೀ ಮಾವನಾದೆ ಭಾವಗೆ ನೀ ಸಖ ಭಾವನಾದೆ ರಂಗ, ಭಾವಗೆ ಭವಣೆಯ ಪಡಿಸಿದೆ ರಂಗ || ಅತ್ತೆಯ ಅರ್ತಿಯಿಂದಲಿ ಕೂಡಿ, ಅತ್ತೆಯ ಮಗಳ ನೀ ಮದುವ್ಯಾದೆ ಮತ್ತೊಬ್ಬರಿಗುಂಟೆ ಈ ಪರಿ ಮಹಿಮೆ, ಉತ್ತಮ ಪುರಂದರವಿಠಲಗಲ್ಲದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು