ಹೊಲತಿ ಹೊಲೆಯ ಇವರವರಲ್ಲ

ಹೊಲತಿ ಹೊಲೆಯ ಇವರವರಲ್ಲ

(ರಾಗ ನಾದನಾಮಕ್ರಿಯ. ಆದಿತಾಳ ) ಹೊಲತಿ ಹೊಲೆಯ ಇವರವರಲ್ಲ ||ಪ|| ಹೊಲಗೇರಿಲಿ ಹೊಲೆಯ ಹೊಲತಿಲ್ಲ ||ಅ.ಪ|| ಸತಿವಶನಾಗಿ ಜನನಿ ಜನಕಗೆ ಅತಿ ನಿಷ್ಠುರ ನುಡಿವವ ಹೊಲೆಯ ಸುತರ ಪಡೆದು ವಾರ್ಧಿಕಮದವೇರಿ ಪತಿ ದ್ವೇಷ ಮಾಡುವವಳೆ ಹೊಲತಿ ಗುರುವಿದ್ಯಾ ಕಲಿದು ಸುಖದಲ್ಲಿ ಜೀವಿಸಿ ಹಿರಿಯರ ಬಳಲಿಸುವವ ಹೊಲೆಯ ಪುರುಷರಿಗೊಲಿದು ಸ್ವಪುರುಷನ ಸರ್ವದಾ ವಿರಸ ಮಾಡುವವಳೆ ಹೊಲತಿ ಒಡೆಯನನ್ನವ್ನುಂಡು ಅವನ ಕೂಡ ಬಡಿದಾಡಿ ರೋಷ ತಾಳ್ವನೇ ಹೊಲೆಯ ಬಡತನ ಬಂದರೆ ಅಡಗಡಿಗೊಮ್ಮೆ ಹೊಡೆದಾಡಿ ಪತಿಯ ಬೈವಳೆ ಹೊಲತಿ ನೂರೊಂದು ಕುಲ ಕುಂಭೀಪಾಕಕಟ್ಟುವ ಪರ- ನಾರೀಲಿ ವೀರ್ಯವಿಟ್ಟವ ಹೊಲೆಯ ಯಾರೊಳು ಕಲಹ ಅಪಸ್ಮಾರಿ ದುರ್ವಾದಿ ಕರಾಳ ಕುಮತಿ ಇಹಳೇ ಹೊಲತಿ ದುರ್ಬಲ ಜನರನು ಕಂಡು ಮರುಗದೆ ನಿರ್ಭೀತಿಲಿ ಇರುವವ ಹೊಲೆಯ ಅರ್ಭಕತನದಲಿ ಮದನ ಚೇಷ್ಟೆಯಲಿ ದುರ್ಬುದ್ಧಿ ಮಾಡುವವಳೆ ಶುದ್ದ ಹೊಲತಿ ಹರಿಪಾದತೀರ್ಥವು ಹರಿನಿರ್ಮಾಲ್ಯವು ಹರಿಪ್ರಸಾದವರಿಯದವ ಹೊಲೆಯ ಪರಧರ್ಮಕೆ ಅನುಕೂಲವಾಗದೆ ಸಾಧು ಪರರ ಜರೆದು ಮೆರೆವವಳೆ ಹೊಲತಿ ಅಜನ ಪಿತ ನಾರಾಯಣನ ಪಾದದ ಭಜನೆ ಮಾಡದವನತಿ ಹೊಲೆಯ ನಿಜವಾದ ಪುರಂದರವಿಟ್ಠಲರಾಯನ ತ್ಯಜಿಸಿ ಬಾಳ್ವಳೆ ಅತ್ಯಂತ ಹೊಲತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು