ಹೊಂದಿ ಸುಖಿಸು ಹರಿಯ ಪಾದ

ಹೊಂದಿ ಸುಖಿಸು ಹರಿಯ ಪಾದ

( ಭೀಮ ಪಲಾಸ್ ರಾಗ ಆದಿತಾಳ(ತೀನ್ ತಾಲ್ )) ಹೊಂದಿ ಸುಖಿಸು ಹರಿಯ ಪಾದ ||ಧ್ರುವ|| ನಾನಾ ಪುಣ್ಯ ನಿದಾನದಿ ಧರೆಯೊಳು ಮಾನವ ಜನುಮಕೆ ನೀನೀಗ ಬಂದು ಶ್ವಾನ ಸೂಕರ ಪರಿ ತಾ ನಿಜವರಿಯದೆ ಜ್ಞಾನಶೂನ್ಯವಾಗಿ ನೀನಿಹುದಣ್ಣ ||೧|| ಹಿಡಿವರೆ ಭ್ರಾಂತಿಯ ಜಡಿವರೆ ಮಮತೆಯ ನುಡಿವರೆ ಪುಸಿಯನು ಬಿಡುವರೆ ಸತ್ಯವ ಇಡುವರೆ ದುರ್ಗುಣ ಸಿಡುವರೆ ಬೋಧಕೆ ಕೆಡುವರೆ ಮರವಿಲಿ ಮಡಿವರೆ ವ್ಯರ್ಥ ||೨|| ಮೂರುದಿನದ ಸಂಸಾರದೊಳಗೆ ಕಂ- ಸಾರಿಯ ಭಕ್ತಿಯ ಸೇರಿ ಭವಾಬ್ಧಿಯ ಪಾರವಗಾಂಬುದು ಸಾರಸ್ವಹಿತ ಸಹ- ಕಾರ ಮಹಿಪತಿ ಸಾರಿದ ಬೋಧ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು