ಹೊಂತಕಾರಿ ನೀನೇವೆ

ಹೊಂತಕಾರಿ ನೀನೇವೆ

( ರಾಗ ಬೇಹಾಗ್ ಛಾಪು ತಾಳ) ಹೊಂತಕಾರಿ ನೀನೇವೇ ಎಂತೊ ಹನುಮಂತರಾಯ ||ಪ|| ಶಾಂತ ಅತಿ ಬಲವಂತ ಅಂತವಿದೂರ ಶಾಂತ ದಾಂತ ಸುರಕಾಂತ ಹಂತ ವೇದಾಂತ ದೈತ್ಯ ಹಂತ ವಾದದು- ರಂತ ನುತ ನಿಯಂತ ಯುಕ್ತಿವಂತ || ಸಾಗರವನು ಬಲು ವೇಗದಿಂದಲಿ ದಾಟಿ ಬೇಗ ಲಂಕೆಗೆ ಪೋಗಿ ಆಗ ಬಂದ ದೈತ್ಯರ ನೀಗಾಡಿ ಸಂಗರವಾಗಿ ಉಂಗುರವ ಸೀತಾಂಗನೆಗೆ ಕಪಿ ಪುಂಗವೇಂದ್ರ ನೀಡಿ ಸಂಗಡವೋಗಾಡಿ ನಗರವು ನೋಡಿ ಸುಟ್ಟು ಬೂದಿಮಾಡ್ದ || ತಾಮರಸ ಬಂಧುನೇಮ ವಂಶವಾರಿಧಿಸೋಮ- ನಾದ ಶ್ರೀ ಸೀತಾರಾಮ ಪಾದಪಂಕಜಧಾಮ ಸೋಮಜರಾಮ ಕೋಮಲಾಂಗ ವರನಾಮ ಭೂಮ ಗುಣಧಾಮ ನರಮೃಗೇಂದ್ರ ಜಲಧಿಚಂದ್ರ ಸುಗುಣಸಾಂದ್ರ ಸುರವರೇಂದ್ರ || ವೀರರ ಗೆಲಿದತಿಶೂರ ಉರು ಸನ್ನ್ಹಿತ ಧೀರ ಜಗನ್ನಾಥ ಪುರಂದರವಿಠಲನ ಪುರವರ ಉರದಲಿದ್ದ ಧೀರ ಕರುಣಾಕರ ಘೋರ ದೈತ್ಯನಿವಾರ ಸುರವರ(/ಶೂರವರ?) ಚಾರು ನೇಡಿದ ವೀರ ದುರಿತವಾರ ಶರಣಶೂರ ವೀರಾಧಿವೀರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು