ಹೇಗೆ ಮಾಡಬೇಕೋ ವಿಠಲ ತಂದೆ

ಹೇಗೆ ಮಾಡಬೇಕೋ ವಿಠಲ ತಂದೆ

( ರಾಗ ಕಮಾಚ್. ಆದಿ ತಾಳ) ಹೇಗೆ ಮಾಡಬೇಕೋ ವಿಠಲ ತಂದೆ , ಹೇಗೆ ಮಾಡಬೇಕೋ ||ಪ|| ಹೇಗಾದರು ದುರಿತಗಳೆನ್ನ ಕಾಡದ , ಹಾಗೆ ಮಾಡಬೇಕೋ ||ಅ|| ಇಂದಿನ ನರಜನ್ಮವೋ ನಿನ್ನ ಕೃಪೆಯಿಂದ ದೊರಕಿತಲ್ಲೊ ಮುಂದೆನ್ನ ತಾಯ ಗರ್ಭದಿಂದ ಜನಿಸಿದ ಹಾಗೆ ಮಾಡಬೇಕೋ ವಿಠಲ ತಂದೆ || ನಿನ್ನನು ಬೇಡುವುದೆ ದುಷ್ಕರ್ಮದ ಹಾನಿಯೊಂದೆ ಸಾಲದೆ ಹೀನ ಮಾನವರಿಗೆ ನಾ ಕೈ ಜೋಡಿಸದ್ಹಾಂಗೆ ಮಾಡಬೇಕೋ ವಿಠಲ ತಂದೆ || ಕರುಣಿಸೋ ಪುರಂದರವಿಠಲ ತಂದೆ ಮರೆಹೊಕ್ಕೆನೊ ಪೂರಾ ಶರಣಾಗತವತ್ಸಲನೆಂಬೊ ಬಿರುದುಳ್ಳ ಹಾಂಗೆ ಮಾಡಬೇಕೋ ವಿಠಲ ತಂದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು