ಹಾಂಗೆ ಇರಬೇಕು ಸಂಸಾರದಲ್ಲಿ

ಹಾಂಗೆ ಇರಬೇಕು ಸಂಸಾರದಲ್ಲಿ

( ರಾಗ ಮುಖಾರಿ ಅಟತಾಳ)

ಹಾಂಗೆ ಇರಬೇಕು ಸಂಸಾರದಲ್ಲಿ

ಹ್ಯಾಂಗೆ ಬರೆದಿತ್ತೋ  ಪ್ರಾಚೀನದಲ್ಲಿ ||

 

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ

ಆ ಕ್ಷಣದಲ್ಲಿ ಹಾರಿ ಹೋದಂತೆ

ನಾನಾ ಪರಿಯಲ್ಲಿ ಸಂತೆ ನೆರೆದಂತೆ

ನಾನಾ ಪಂಥವ ಹಿಡಿದು ಹೋದಂತೆ ||


ವಸ್ತಿಗಾರನು ವಸ್ತಿ ಬಂದಂತೆ 

ಹೊತ್ತಾರೆ ಎದ್ದು ಹೊರಟುಹೋದಂತೆ 

ಸಂಸಾರವೆಂಬೋ ಪಾಶ ನೀನೇ ಬಿಡಿಸಯ್ಯ 

ಕಂಸಾರಿ ಪುರಂದರವಿಠಲರಾಯ  ||

 

( ....

ಆಡುವ ಮಕ್ಕಳು ಮನೆ ಕಟ್ಟಿದರು ಆಟ ಸಾಕೆಂದು ಮುರಿದು ಓಡಿದರು ....) 

 

 

ದಾಸ ಸಾಹಿತ್ಯ ಪ್ರಕಾರ
ಬರೆದವರು