ಹಸಿವಾಯಿತೇಳಿ ದೇವರ ತೊಳೆಯೆಂಬರು

ಹಸಿವಾಯಿತೇಳಿ ದೇವರ ತೊಳೆಯೆಂಬರು

ಹಸಿವಾಯಿತೇಳಿ ದೇವರ ತೊಳೆಯೆಂಬರು ಹಸನಾಗಿ ಮನದಲ್ಲಿ ಮುಟ್ಟಿ ಪೂಜೆಯ ಮಾಡರು ಹಸಿ ಹಾವಿನ ಬುಟ್ಟಿಯಂತೆ ಮುದ್ದಿಟ್ಟುಕೊಂಡು ವಸುಧೆಯೊಳಗೆ ಉರಗಗಾರನಾಟ ಮಾಡುವರಯ್ಯ ಪರಧನ ಪರಸತಿ ಪರದ್ರವ್ಯಕ್ಕೆರಗೋರು ತ್ವರೆಗಳಾಗಿದ್ದರೆ ದುರಿತ ಪೋಗುವುದೆ ಸರುವವೆಲ್ಲವ ತೊರೆದು ಹರಿಯ ಧ್ಯಾನವ ಮಾಡಿ ವರವ ಕೊಡು ನಮ್ಮ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು