ಹರಿ ಹರಿಯೆನಲಿಕ್ಕೆ ಹೊತ್ತಿಲ್ಲ

ಹರಿ ಹರಿಯೆನಲಿಕ್ಕೆ ಹೊತ್ತಿಲ್ಲ

( ರಾಗ ಪೂರ್ವಿ ಏಕ ತಾಳ) ಹರಿ ಹರಿಯೆನಲಿಕ್ಕೆ ಹೊತ್ತಿಲ್ಲ, ಈ ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ||ಪ|| ಹರಿಜಾಗರಣೆಯಲ್ಲಿ ಪಾರಣೆ ಚಿಂತೆ ನಿರತ ಯಾತ್ರೆಯಲ್ಲಿ ಶಾಕದ ಚಿಂತೆ ಸರುವ ಸತ್ಕಾರ್ಯದಿ ಧನದ ಮೇಲಿನ ಚಿಂತೆ ಪುರಾಣ ಕೇಳ್ವಾಗ ಗೃಹದ ಚಿಂತೆ || ಕರ್ಮದಿ ಒಂದು ಚಿಂತೆ ಧರ್ಮದಿ ಒಂದು ಚಿಂತೆ ಪೆರ್ಮನ ಮಾಡಲು ಬಲು ಚಿಂತೆ ವರ್ಮ ವೈರದಿ ಚಿಂತೆ ಈರ್ಮನಸ್ಸಾಗೆ ಚಿಂತೆ ದುರ್ಮದದಿ ನಡೆಯೆ ಪ್ರಾಣದ ಚಿಂತೆ || ಗಂಗೆ ಮುಳುಗುವಾಗ ಚೆಂಬು ಮೇಲಿನ ಚಿಂತೆ ಸಂಗಡದವರು ಪೋಗುವ ಚಿಂತೆ ಪನ್ನಗ ಶಯನ ಶ್ರೀ ಪುರಂದರವಿಠಲನ್ನ ಹಿಂಗದೆ ಭಜಿಸಲು ಸತತ ನಿಶ್ಚಿಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು