ಹರಿ ಹರರು ಹೇಗೆ ಸಮರು

ಹರಿ ಹರರು ಹೇಗೆ ಸಮರು

( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ) ಹರಿ ಹರರು ಹೇಗೆ ಸಮರು ಹರಿಹರ ಭಕ್ತರೆ ಇದಕೆ ಸಾಕ್ಷಿ ||ಪ|| ಹರಿಯ ಮಂದಿರ ವೈಕುಂಠಸ್ಥಾನ ಹರನ ಮಂದಿರ ಶ್ಮಶಾನ ಹರಿಯ ಪಟ್ಟದ ರಾಣಿ ಸಿರಿದೇವಿ ಎಂಬರು ಹರನ ಪಟ್ಟದ ರಾಣಿ ಗಿರಿಜೆ ಎಂಬರು || ಹರಿಯು ಉಡುವೋದು ಪೀತಾಂಬರ ಹರನುಡುವೋದು ಚರ್ಮಾಂಬರ ಹರಿಯು ಪೂಸುವುದು ಶ್ರೀಗಂಧ ಕಸ್ತೂರಿ ಹರನು ಪೂಸುವುದು ಶ್ಮಶಾನದ ಬೂದಿ || ಹರಿಯ ಕೊರಳೊಳು ಕೌಸ್ತುಭರನ್ನ ಹರನ ಕೊರಳೊಳು ಗರಳದ ಚಿಹ್ನ ಹರಿಯ ಆಯುಧವು ವರಶಂಖಚಕ್ರ ಹರನ ಆಯುಧವು ತ್ರಿಶೂಲ ಡಮರು || ಹರಿಯ ಪರಿವಾರ ಬ್ರಹ್ಮಾದಿ ಸುರರು ಹರನ ಪರಿವಾರ ಹೆಣನ ತಿಂಬುವರು ಹರಿಹರಿ ಎಂಬೋರು ಸಿರಿವಂತರಾಗುವರು ಹರಹರ ಎಂಬೋರು ಹತರಾಗುವರು || ಹರಿಗೆ ವಾಹನನಾದ ಖಗರಾಜನು ಹರಗೆ ವಾಹನ ಗೋರಾಜನು ಪುರಂದರವಿಠಲಗೆ ಸರಸಿಜಾಸನ ಪುತ್ರ ಹರ ಆಗಮೋಕ್ತ ಆದನು ಪೌತ್ರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು