ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ

ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ

(ರಾಗ ಪೂರ್ವಿ. ಝಂಪೆ ತಾಳ ) ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ ಹರಿ ಕೊಡದ ಕಾಲಕೆ ಬಾಯಿ ಬಿಡುವ್ಯಲ್ಲೊ ಪ್ರಾಣಿ ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಿಟ್ಟು ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೊ ಪ್ರಾಣಿ ಹತ್ತು ಸಾವಿರ ಹೊನ್ನು ತಿಪ್ಪೇಲಿ ಪೋಪಾಗ ಮೃತ್ತಿಕೆ ಬಾಯಲ್ಲಿ ಬಿತ್ತಲ್ಲೊ ಪ್ರಾಣಿ ಹುಗ್ಗಿಯು ತುಪ್ಪವು ಮನೆಯೊಳಗಿರಲಿಕ್ಕೆ ಗುಗ್ಗುರಿಯನ್ನವ ತಿಂದ್ಯಲ್ಲೊ ಪ್ರಾಣಿ ವೆಗ್ಗಳದ ಭಾಗ್ಯ ಗಳಿಗೇಲಿ ಪೋಪಾಗ ಬುಗ್ಗೆಯ ಹೋಯ್ಕೊಂಡು ಹೋದ್ಯಲ್ಲೊ ಪ್ರಾಣಿ ನೆಂಟರಿಷ್ಟರು ಬಂದು ಮನೆ ಮುಂದೆ ಕುಳಿತಿರಲು ಕುಂಟ ಸುದ್ದಿ ನೀನಾಡಿದ್ಯಲ್ಲೊ ಪ್ರಾಣಿ ಕಂಟಕ ಯಮನವರು ಕುಂಠಿಸುತ್ತೆಳೆವಾಗ ನೆಂಟ ಪುರಂದರವಿಟ್ಟಲೆನ್ನು ಪ್ರಾಣಿ || ( "ನೆಂಟ ಪುರಂದರವಿಟ್ಟಲನು ಪ್ರಾಣಿ" ಎಂದು ಇನ್ನೊಂದು ಪಾಠದಲ್ಲಿ ಇದೆ )
ದಾಸ ಸಾಹಿತ್ಯ ಪ್ರಕಾರ
ಬರೆದವರು