ಹರಿಯ ನೆನೆವನೆ ಅಜ್ಞಾನಿ ?

ಹರಿಯ ನೆನೆವನೆ ಅಜ್ಞಾನಿ ?

( ರಾಗ ಪೂರ್ವಿ ಆದಿತಾಳ) ಹರಿಯ ನೆನೆವನೆ ಅಜ್ಞಾನಿ , ಘೋರ- ದುರಿತಗಳಿಗೆ ಸಿಲುಕುವನೆ ಸುಜ್ಞಾನಿ ||ಪ|| ತಂದೆಯ ಬಯ್ಯುವನೆ ಪುತ್ರ , ಕಡು ನಿಂದೆಯ ಮಾಡ್ವನೆ ಪರಮಪವಿತ್ರ ಬಂಧನವ ಗೆಯ್ವನೆ ಮಿತ್ರ , ರಣಕೆ ಮುಂದಾಗಿ ನಡೆಯದಿರುವನೆ ಕ್ಷಾತ್ರ || ದಾನಂಗಳೀವನೆ ಪಾಪಿ , ಕಡು ದೀನರ ದಂಡಿಸುತಿರುವನೆ ಪ್ರತಾಪಿ ಮೌನದಿಂದಿರುವನೆ ಕೋಪಿ , ಮತ್ತೆ ಏನೇನು ತಿಳಿಯದವನೆ ನಿರ್ಲೇಪಿ || ಮದನನಂತಿರ್ಪನೆ ಕೇಡ , ತನ್ನ ಹೃದಯದಿ ಹರಿಯ ಭಜಿಸುವನೆ ಮೂಢ ಕದನಕೆಳಸುವನೆ ಪ್ರೌಢ ನಮ್ಮ ಪುರಂದರವಿಠಲನ ನೋಡ್ವನೆ ಕುರುಡ ||
ದಾಸ ಸಾಹಿತ್ಯ ಪ್ರಕಾರ
ಬರೆದವರು