ಹರಿಯ ನೆನೆಯಿರೋ

ಹರಿಯ ನೆನೆಯಿರೋ

(ರಾಗ ಶಂಕರಾಭರಣ. ಅಟ ತಾಳ ) ಹರಿಯ ನೆನೆಯಿರೋ, ನಮ್ಮ ಹರಿಯ ನೆನೆಯಿರೋ ||ಪ|| ಬರಿಯ ಮಾತನಾಡಿ ಬಾಯ ಬರಡು ಮಾಡಿ ಕೆಡಲು ಬೇಡಿ ||ಅ|| ನಿತ್ಯವಲ್ಲ ಈ ಶರೀರವ- ನಿತ್ಯವೆಂದು ನೋಡಿರಯ್ಯ ಹೊತ್ತು ಕಳೆಯ ಬೇಡಿ ಕಾಲ ಮೃತ್ಯು ಬಾಹೋದೀಗಲೆ ಕಾಮ ಕ್ರೋಧಗಳನು ತೊರೆದು ಕಾಮನಯ್ಯನ ಕಥೆಯ ಬರೆದು ಪ್ರೇಮದಿಂದ ಭಜಿಸಿರಯ್ಯ ಪಾಮರರಂತೆ ತಿರುಗದೆ ಹಾಳು ಹರಟೆಯಾಡಿ ಮನವ ಬೀಳುಮಾಡಿಕೊಳ್ಳಬೇಡಿ ಏಳು ದಿನದ ಕಥೆಯ ಕೇಳಿ ಏಳಿರೋ ವೈಕುಂಠಕೆ ಮೆಟ್ಟೆ ಪುಣ್ಯ ಕ್ಷೇತ್ರವನ್ನು ಸುಟ್ಟು ಹೋಗ್ವುದಯ್ಯ ಪಾಪ ಮುಟ್ಟಿ ಭಜಿಸಿರಯ್ಯ ಪುರಂದರ ವಿಟ್ಠಲನ್ನ ಚರಣವ
ದಾಸ ಸಾಹಿತ್ಯ ಪ್ರಕಾರ
ಬರೆದವರು