ಹರಿಯೇ ಸರ್ವೋತ್ತಮ ಹರಿಯೆ ಪರದೇವತೆ

ಹರಿಯೇ ಸರ್ವೋತ್ತಮ ಹರಿಯೆ ಪರದೇವತೆ

( ರಾಗ ಸಾವೇರಿ. ಝಂಪೆ ತಾಳ) ಹರಿಯೇ ಸರ್ವೋತ್ತಮ ಹರಿಯೆ ಪರದೇವತೆ ||ಪ|| ಹರಿಯಲ್ಲದನ್ಯತ್ರ ದೈವಗಳುಂಟೆಂದು ಉರಗನ ಮುಂಡಿಗೆಯ ಯಾರಾದರೆತ್ತಲಿ ||ಅ || ವಿಶ್ವತಶ್ಚಕ್ಷು ನೀನೇ ವಿಶ್ವತೋಮುಖ ನೀನೇ ವಿಶ್ವತೋಬಾಹು ವಿಶ್ವದುದರ ನೀನೇ ವಿಶ್ವವ್ಯಾಪಕ ವಿಶ್ವಸೂತ್ರಧರ ನೀನೇ ವಿಶ್ವನಾಟಕ ಶ್ರೀವಿಷ್ಣುವೇ ನಮೋ ನಮೋ || ಜಗಂಗಳ ಸೃಜಿಸುವ ಬೊಮ್ಮ ನಿನ್ನ ಮಗ ಜಗಂಗಳ ಪಾವನೆ ನಿನ್ನ ಸುತೆ ಜಗಂಗಳ ಜೀವನಿ ರಾಣಿ ಮಹಾಲಕ್ಷ್ಮಿ ಜಗವ ಮೋಹಿಸುತಿರ್ಪ ಮಾಯೆ ಮನೆಯ ತೊತ್ತು || ಆಗಮ ನಿಗಮ ಪುರಾಣ ಶಾಸ್ತ್ರಂಗಳಲ್ಲಿ ಯೋಗಿಗಳರಸಿ ನಿಮ್ಮ ಕಾಣದಿಪ್ಪರೊ ನಾಗಶಯನ ಭುಜಂಗ ಭೂಷಣವಂದಿತ ಭಾಗವತಪ್ರಿಯ ಪುರಂದರವಿಠಲ || ---ಇನ್ನೊಂದು ಆವೃತ್ತಿ ಹೀಗಿದೆ ಹರಿಯೇ ಸರ್ವೋತ್ತಮ ಹರಿಯೆ ಪರದೇವತೆ ಹರಿ ಸರ್ವ ವಿಶ್ವಮಯಂ ಜಗತು ||ಪ|| ಹರಿಯಲ್ಲದನ್ಯತ್ರ ದೈವಗಳಿಲ್ಲವೆಂದು ಉರಗನ ಹೆಡೆಯನ್ನು ಪಿಡಿದು ಹೇಳುವೆನಯ್ಯ ||ಅ || ಜಗಂಗಳ ಪುಟ್ಟಿಸುವ ಬ್ರಹ್ಮ ನಿನ್ನ ಮಗ ಜಗವ ಸಂಹರಿಸುವ ರುದ್ರ ಮೊಮ್ಮಗನು ಜಗದ ಪಾವನೆ ಭಾಗೀರಥಿ ನಿನ್ನ ಮಗಳಯ್ಯ ಜಗದ ಜೀವದ ಮಾತೆ ನಿನ್ನರಸಿಯೊ ದೇವ || ವಿಶ್ವತೋಮುಖ ನೀನೇ ವಿಶ್ವತಶ್ಚಕ್ಷು ನೀನೇ ವಿಶ್ವತೋಬಾಹು ವಿಶ್ವಪಾದನು ನೀನೆ ವಿಶ್ವವುದರ ನೀನೇ ವಿಶ್ವವ್ಯಾಪಕ ನೀನೆ ವಿಶ್ವನಾಟಕ ಸೂತ್ರಧಾರಿಯೆ ವಿಷ್ಣುವೆ || ಆಗಮ ನಿಗಮ ಪುರಾಣಗಳೆಲ್ಲವು ಯೋಗಿಜನ ಪೊಗಳುತ್ತಿರೆ ನಾಗಶಯನ ಭೋಗಿಭೂಷಣವಂದಿತ ಭಾಗವತರ ಪ್ರಿಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು