ಹರಿಯಧಿಕ ಹರನಧಿಕನೆಂದು ಬಡೆದಾಡದಿರಿ

ಹರಿಯಧಿಕ ಹರನಧಿಕನೆಂದು ಬಡೆದಾಡದಿರಿ

( ರಾಗ ಕಾಂಭೋಜ. ಝಂಪೆ ತಾಳ) ಹರಿಯಧಿಕ ಹರನಧಿಕನೆಂದು ಬಡೆದಾಡದಿರಿ ಹರಿಹರ ಭಕುತರೆ ಇದಕೆ ಸಾಕ್ಷಿ ||ಪ|| ಹರಿಯು ಬಾಗಿಲ ಕಾಯ್ದು ಬಲಿ ಭಾಗ್ಯವಂತನಾದ ಹರನು ಬಾಗಿಲ ಕಾಯ್ದು ಬಾಣನಳಿದ ಹರಿಯೊಲಿದು ಭೀಮನಿಗೆ ಪರಿಪೂರ್ಣ ವರವಿತ್ತ ಹರನೊಲಿದು ಜರಾಸಂಧ ಹತನಾದುದರಿಯ || ಹರಿಯ ನೆನೆದು ಪ್ರಹ್ಲಾದ ಬಂದ ದುರಿತವ ಗೆದ್ದ ಹರನ ನೆನೆದವನ ಪಿತ ಹತನಾದನು ಹರಿಯ ನೆನೆದು ವಿಭೀಷಣ ಪೂರ್ಣ ವರ ಪಡೆದ ಹರನ ವರ ಪಡೆದ ರಾವಣ ಹತನಾದನರಿಯ || ಹರನ ವರ ಪಡೆದ ಭಸ್ಮಾಸುರನು ಗರ್ವದಲಿ ಹರನ ಶಿರದಲಿ ಕರವಿಡಲು ಬರಲು ಹರಿ ನೀನೇ ಗತಿಯೆಂದು ತ್ರಿಪುರಾರಿ ಮೊರೆಯಿಡಲು ವರದ ಪುರಂದರವಿಠಲ ಕಾಯ್ದನರಿಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು