ಹರಿನಾಮದರಗಿಣಿಯು ಹಾರುತಿದೆ ಜಗದಿ

ಹರಿನಾಮದರಗಿಣಿಯು ಹಾರುತಿದೆ ಜಗದಿ

( ರಾಗ ಕಾಂಭೋಜ. ಅಟ ತಾಳ) ಹರಿನಾಮದರಗಿಣಿಯು ಹಾರುತಿದೆ ಜಗದಿ ಪರಮ ಭಾಗವತರು ಬಲೆಯ ಬೀಸುವರು ||ಪ|| ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು ತಾಪವೆಂಬುವ ಹುಲಿಯು ಕೊಂಡೊಯ್ವುದು ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು || ದಾರಿಯೊಳು ನಡೆವಾಗ ಚೋರರುಪಟಳವಿಲ್ಲ ಮಾರಿ ಬಂದರೆ ಅದನು ಹೊಡೆದು ನೂಕುವುದು ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು ದಾರಿ ತೋರುವುದು ಮುರಾರಿಪಟ್ಟಣಕೆ || ಎಷ್ಟು ವರ್ಣಿಸಲಿ ನೀನೀ ಮುದ್ದು ಅರಗಿಣಿಯ ಹೊಟ್ಟೆಯೊಳಗಿರೇಳು ಜಗವನಿಂಬಿಟ್ಟು ಸೃಷ್ಟೀಶ ಪುರಂದರವಿಠಲನ ನೆನೆನೆನೆದು ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು ||
ದಾಸ ಸಾಹಿತ್ಯ ಪ್ರಕಾರ
ಬರೆದವರು