ಹನುಮಂತ ದೇವ ನಮೋ

ಹನುಮಂತ ದೇವ ನಮೋ

(ರಾಗ: ಭೂಪಾಳಿ. ಏಕ ತಾಳ) ಹನುಮಂತ ದೇವ ನಮೋ ||ಪ|| ವನಧಿಯನು ದಾಟಿ ದಾನವರ ದಂಡಿಸಿದ ||ಅ.ಪ|| ಅಂಜನೆಯ ಗರ್ಭ ಪುಣ್ಯೋದಯನೆಂದೆನಿಪೆ ಕಂಜಸಖ ಮಂಡಲಕೆ ಕೈದುಡುಕಿದೆ ಭುಂಜಿಸಿ ಇರಲು ಜನಂಗಳನು ನಡುಗಿಸಿದೆ ಭಂಜರತ್ಮಕೆ ನಿನಗೆ ಸರಿ ಯಾರು ಗುರುವೆ || ಹೇಮಕುಂಡಲ ಹೇಮಯಜ್ಞೋಪವೀತಧರ ಹೇಮಕಟಿಸೂತ್ರ ಕೌಪೀನವನು ಧರಿಸಿ ರೋಮರೋಮಕೆ ಕೋಟಿ ಲಿಂಗ ಸರ್ವಾಂಗ ರಾಮಭೃತ್ಯನೆ ನಿನಗೆ ಸರಿ ಯಾರು ಗುರುವೆ || ಅಕ್ಷಕುಮಾರಕನ ನಿಕ್ಷರಸಿ ಬಿಟ್ಟೆ ನೀ ರಾಕ್ಷಸರೊಳಧಿಕ ರಾವಣನ ರಣದಲ್ಲಿ ವಕ್ಷಸ್ಥಳ ಒದೆದು ಮೂರ್ಛಿಸಿ ಬಿಸಾಟೆ ತ್ರಿಜಗ- ರಕ್ಷಕನ ಶಿಕ್ಷಕ ಶ್ರೀ ರಾಮದಳರಕ್ಷ || ರಾಮ ಲಕ್ಷ್ಮಣರ ಕಟ್ಟಾಳಾಗಿ ನೀ ನಡೆದೆ ಭೂಮಿಜೆಗೆ ಮುದ್ರೆಯುಂಗುರವನಿತ್ತೆ ಆ ಮಹಾ ಲಂಕೆನಗರವೆಲ್ಲವನು ನೀ ಧೂಮಧಾಮವ ಮಾಡಿ ಮೆರೆದೆ ಮಹಾತ್ಮ || ಶ್ರೀಮದಾಚಾರ್ಯರ ಪುರಪತಿಯೆಂದೆನಿಪ ಶ್ರೀ ಮಹಾಲಕುಮಿ ನಾರಾಯಣ ರೂಪ ಶ್ರೀ ಮನೋಹರ ಪುರಂದರ ವಿಠಲನವಸರಾ- ಪ್ರೇಮದಾಳು ಹನುಮಂತ ಬಲವಂತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು