ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು

ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು

ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು ಭಂಗಿಸಿ ಭಂಗಿಸಿ ಎನಗೆ ಬಯಲಾಸೆ ಕೆಡಿಸಿದರು ಕಂಗೆಡಿಸಿ ಕಂಗೆಡಿಸಿ ಕಾಮಕ್ರೋಧ ಬಿಡಿಸಿದರು ಹಿಂದೆ ನಿಂದಿಸಿದರೆ ಎನ್ನ ಬಂಧುಬಳಗ ಬಾಯಿಬಡುಕರಿಂದ ನಾನು ಬದುಕಿದೆನೋ ಹರಿಯೆ | ಕಾಡಿ ಕಾಡಿ ಕೈವಲ್ಯಪದವಿತ್ತರು ಕಾಸು ಹುಟ್ಟದಂತೆ ಪ್ರಾಯಶ್ಚಿತ್ತ ಮಾಡಿದರು ಮೀಸಲು ಮಾಡಿಸಿದರು ಹರಿಯ ಒಡವೆಯೆಂದು ಲೇಸು ಕೊಡೊ ನಮ್ಮ ಪುರಂದರವಿಠಲನ್ನ ದಾಸರ ದಾಸನೆಂದೆನಿಸಯ್ಯ ಹರಿಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು