ಸ್ಮರಿಸೊ ಸರ್ವದ ಹರಿಯ

ಸ್ಮರಿಸೊ ಸರ್ವದ ಹರಿಯ

( ರಾಗ ಶಂಕರಾಭರಣ ಛಾಪುತಾಳ) ಸ್ಮರಿಸೊ ಸರ್ವದ ಹರಿಯ ||ಪ|| ಸುರವರ ದೊರೆಯ ಕರುಣಾನಿಧಿಯ ||ಅ|| ಮುನಿಜನ ವಂದ್ಯನ ಮನಸಿಜನಯ್ಯನ ಮನದಲಿ ಅನುದಿನ ನೆನೆಯೊ ಹರಿಯ || ನಂದನ ಕಂದನ ಇಂದಿರೆಯರಸನ ಮಂದರೋದ್ಧರನ ಚಂದದಿಂದಲಿ ಹರಿಯ || ವರಗುಣಪೂರ್ಣನ ಸರಸಿಜನೇತ್ರನ ಪರವಾಸುದೇವನ ಪ್ರಾಣದ ಪ್ರಿಯನ || ಕಂಜದಳೇಕ್ಷಣ ಮಂಜುಳಹಾರನ ಅರ್ಜುನಸಾರಥಿ ಸಜ್ಜನಪ್ರಿಯನ || ವೆಂಕಟರಮಣನ ಸಂಕಟಹರಣನ ಲಕ್ಷ್ಮೀರಮಣನ ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು