ಸುಮ್ಮನಿರು ಸುಮ್ಮನಿರು

ಸುಮ್ಮನಿರು ಸುಮ್ಮನಿರು

( ರಾಗ ಕಾಂಭೋಜ. ಝಂಪೆ ತಾಳ) ಸುಮ್ಮನಿರು ಸುಮ್ಮನಿರು ಬೇಡಿಕೊಂಬೆ ||ಪ|| ಈ ಮಹಿಯೊಳತಿಶಯದ ಗುಮ್ಮ ಬಂದಿದಕೋ ||ಅ|| ಐದು ಮುಖ ಮತ್ತೆ ಮೂರೈದು ಕಣ್ಣುಗಳಿಂದ ಐದು ಮುಖದೊಳಗ್ನಿಕಿಡಿ ಉದುರಿಸಿ ಐದೆರಡು ತೋಳುಗಳ ನೀಡಿ ಒಲಿದಾಡಿಸುತ ಐದುಬಾಣನ ಗೆದ್ದ ಗುಮ್ಮ ಬಂದಿದಕೋ || ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದ ಮೇಲೆ ಹೆಣಗಳ ಚುಚ್ಚಿ ಒಲಿದಾಡುತ ಕಾಲಭೈರವನ ಕಾವಲನಿರಿಸಿ ಮರುಳುಗಳ ಓಲಗದಿ ತಲೆಬಾಗಿಲಲಿ ಬಂದನಿದಕೋ || ಮುದಿ ಎತ್ತನೇರಿ ಮೈಯೊಳು ಬೂದಿಯನು ಪೂಸಿ ಮದನಾರಿಯೆಂಬಂಥ ಬಲು ಭೂತವು ಹೃದಯದಲಿ ನಿನ್ನ ನೋಡುವೆನೆಂಬ ಧ್ಯಾನದಲಿ ಒದಗಿ ಬಂದೈದಾನೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು