ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು

ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು

(ಮಿಶ್ರಪೀಲೂ ರಾಗ ಕೇರವಾ ತಾಳ) ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು ||ಪ|| ಸಿಕ್ಕಿದ್ಯೆಲ್ಲೋ ನಮ್ಮ ಕೈಯಾ ಹೊಕ್ಕು ಮನಿಯಾ ಹಕ್ಕಿಯೊಲಾದ್ಯೋ ತೆಕ್ಕಿಯಾ ಪುಕ್ಕಸಾಟಿಯಾ ||೧|| ಬಿಟ್ಟರ ಗೊಲ್ಲತೇರಲ್ಲೋ ಕಟ್ಟಿದಾ ಸೊಲ್ಲೋ ಮುಟ್ಟಿ ಬಿಡುವರಲ್ಲೋ ಘಟ್ಟ್ಯಾಗಿ ನಿಲ್ಲೋ ||೨|| ನಾವು ಬಲ್ಲೆವು ನಿನ್ನಾಟಾ ಎವಿ ಹಾಕು ನೋಟಾ ಹವಣಿಸಿ ಹಿಡಿದೇವೋ ನೀಟಾ ಭಾವಿಸಿ ಈ ಮಾಟಾ ||೩|| ಬಲ್ಲತನವ ದೋರಿದ್ಯೋ ಇಲ್ಲೆ ಮರುಳಾದ್ಯೋ ನಿಲ್ಲೆ ನಮ್ಮೊಳು ನೀನಾದ್ಯೋ ಎಲ್ಲಿಗೆ ಹೋದ್ಯೋ ||೪|| ವಶವಾಗಲಿಕ್ಕೆ ನಮಗ ವಸುಧಿಯೊಳಗ ಯಶೋದೆ ಹಡೆದಳು ಈಗ ಲೇಸಾಗಿ ನಿನಗ ||೫|| ನಾವು ಹಿಡಿದೇವೆಂಬು ಮಾತಾ ಪೂರ್ವಾರ್ಜಿತಾ ನೆವನ ಮಾಡಿತೋ ನವನೀತಾ ಸವಿದೋರಿ ಹಿತಾ ||೬|| ಭಾನುಕೋಟಿ ಸುವುದಯಾ ಮುನಿಜನಾಶ್ರಯಾ ನೀನಾಗಿ ಸಿಕ್ಕಿದ್ಯೋ ಕೈಯಾ ದೀನ ಮಹಿಪತಿಯಾ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು