ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ

ಪಲ್ಲವಿ: ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ ಪಾಮರ ಜನರಿಗೆ ಸಾಮಾನ್ಯವಲ್ಲ ಅನುಪಲ್ಲವಿ: ಸಾಮಜ ವರದನ ಪ್ರೇಮದಿ ನೆನೆವುದು ತಾಮಸ ಬುದ್ಧಿಯ ತಾ ತಗ್ಗಿಸದೆ ಚರಣಗಳು: 1: ಅಂತರ ಮಲಿನವಳಿಯಬೇಕು ಸಂತತ ಶ್ರವಣದಿ ಶ್ರೀಕಾಂತನ ಚರಿತ ಕೇಳಲು ಬೇಕು ಸಂತತವಿರಬೇಕು ಸಂತ ಜನರ ಗುಣ ನಿರಂತರದಲಿ ತಾ ಚಿಂತಿಸಬೇಕು 2: ಜ್ಞಾನ ಕರ್ಮೇಂದ್ರಿಯ ನಿಗ್ರಹಿಸಿ ಜ್ಞಾನವ ಸಂಗ್ರಹಿಸಿ ಹೀನ ವೃದ್ಧಿಗಳೆರಡಕೆ ತಾ ಸಹಿಸಿ ದೀನತೆಯನು ವಹಿಸಿ ಮಾನಾಪಮಾನ ಸಮಾನವೆಂದರಿತು ನಿಧಾನದಿ ಹರಿ ಗುಣ ಧ್ಯಾನವ ಮಾಳ್ಪುದು 3: ಸರ್ವಾಂತರ್ಯಾಮಿ ಶ್ರೀ ಹರಿಯೆಂದು ಸರ್ವೇಶ್ವರನೆಂದು ಸ್ವರಮಣನೆಂದು ಸರ್ವಾನುಗ್ರಹನೆಂದು ಸರ್ವ ಮೂರುತಿ ಪುರಂದರ ವಿಟ್ಠಲನ ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು