Skip to main content

ಸತ್ಯವಂತರಿಗಿದು ಕಾಲವಲ್ಲ

( ರಾಗ ಮುಖಾರಿ ಝಂಪೆತಾಳ)

ಸತ್ಯವಂತರಿಗಿದು ಕಾಲವಲ್ಲ ||ಪ||
ದುಷ್ಟಜನರಿಗೆ ಸುಭಿಕ್ಷಕಾಲ ||

ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ
ಪರಮಪಾಪಿಗಳಿಗೆ ಸುಭಿಕ್ಷಕಾಲ
ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ
ಧರೆಗೆ ಜಾರೆಯಳ ಕೊಂಡಾಡುವ ಕಾಲ ||

ಉಪಕಾರಮಾಡಿದರೆ ಅಪಕರಿಸುವ ಕಾಲ
ಸಕಲವು ತಿಳಿದವಗೆ ದುರ್ಭಿಕ್ಷಕಾಲ
ಪತಿಸುತರು ಎಂಬವರ ನಂಬಲರಿಯದ ಕಾಲ
ಸಟೆಯಲ್ಲವಿದೆ ವಿಪರೀತ ಕಾಲ ||

ಧರ್ಮವ ಮಾಡುವಗೆ ನಿರ್ಮೂಲವಾಗುವ ಕಾಲ
ಕರ್ಮಿಪಾತಕರಿಗೆ ಬಹುಸೌಖ್ಯಕಾಲ
ನಿರ್ಮಲಾತ್ಮಕ ಸಿರಿಪುರಂದರವಿಠಲನ
ಮರ್ಮದೊಳು ಭಜಿಸಲರಿಯದ ಕಾಲವಯ್ಯ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: