ಸಂಸಾರವೆಂಬಂಥ ಭಾಗ್ಯವಿರಲಿ

ಸಂಸಾರವೆಂಬಂಥ ಭಾಗ್ಯವಿರಲಿ

( ರಾಗ ಕಾಂಭೋಜ ಅಟತಾಳ) ಸಂಸಾರವೆಂಬಂಥ ಭಾಗ್ಯವಿರಲಿ ||ಪ|| ಕಂಸಾರಿ ನೆನವೆಂಬ ಸೌಭಾಗ್ಯವಿರಲಿ ||ಅ|| ತಂದೆ ನೀನೇ ಕೃಷ್ಣ ತಾಯಿ ಇಂದಿರೆದೇವಿ ಪೊಂದಿದ ಅಣ್ಣನು ವನಜಸಂಭವನು ಇಂದುಮುಖಿ ಸರಸ್ವತೀದೇವಿಯೆ ಅತ್ತಿಗೆಯು ಎಂದಿಂದಿಗೂ ವಾಯುದೇವರೆ ಗುರುವು || ಭಾರತೀದೇವಿಯೆ ಗುರುಪತ್ನಿ ಎನಗೆ ಗರುಡಶೇಷಾದಿಗಳೆ ಗುರುಪುತ್ರರು ಹರಿದಾಸನೆಂಬುವರೆ ಇಷ್ಟಬಾಂಧವರೆನಗೆ ಹರಿಭಜನೆ ನಡೆಯುತಿಹ ಸ್ಥಳವೆ ಮಂದಿರವು || ಸರುವಾಭಿಮಾನವನು ತ್ಯಜಿಸುವುದೆ ಸುಸ್ನಾನ ಹರಿಯ ನಾಮವೆ ಇನ್ನು ಅಮೃತಪಾನ ವರದ ಪುರಂದರವಿಠಲ ನಿನ್ನ ಪಾದಧ್ಯಾನ ಕರುಣಿಸಿ ಅನವರತ ಕರಪಿಡಿದು ಕಾಯೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು