ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ

ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ

-----ರಾಗ ನವರೋಜು (ಬಿಲಾವಲ್) ಆದಿತಾಳ(ಕಹರವಾ) ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ ಸಾರಿದೆ ಶರಣ ಮ೦ದಾರ ಕರುಣವ || ಪ || ಘೋರ ಭವ ವನಧಿ ತಾರಿಸು ಕರುಣದಿ ಸೂರಿ ಸುಧೀ೦ದ್ರ ಕುಮಾರ ಉದಾರ || ಅ.ಪ || ಮುನಿರಾಯ ನಿಮ್ಮ ಪಾದವನರುಹ ಧ್ಯಾನ ಪ್ರಣವ ಸುಸ್ತವನ ಅರ್ಚನೆ ಮಾಳ್ಪ ನಾನಾ ಜನರ ವಾ೦ಛಿತವೀವ ಗುಣಗಣಪೂರ್ಣ ಜ್ಞಾನ ಧನವ ಪಾಲಿಸೆನಗೀಕ್ಷಣ ನಿನ್ನಾಧೀನ ಮನುಜನ ಪ್ರತಿದಿನ ದಣಿದಣಿಸುವುದು ಘನವೇ ಗುರುಪಾವನತರಚರಿತ || ೧ || ಮೂಲರಾಮನ ಪಾದಕೀಲಾಲಜ ಮಧುಪ ಬಾಲನ ಬಿನ್ನಪ ಲಾಲಿಸೋ ಮುನಿಪ ತಾಳಲಾರೆನೊ ತಾಪತ್ರಯದ ಸ೦ತಾಪ ಕೇಳೊ ವಿಮಲಜ್ಞಾನ ಶೀಲ ಸ್ವರೂಪ ಭೂಲಲನಾಪತಿ ಕೋಲನ೦ದಿನಿ ಕೂಲಗ ವರಮ೦ತ್ರಾಲಯನಿಲಯ || ೨ || ಕಲ್ಮಷದೂರ ಕುಜನಕುಠಾರ ನಳಿನಾಕ್ಷ ವಿಮಲ ಶ್ರೀತುಲಸಿಯ ಹಾರ- ಗಳಶೋಭಿತ ಕಮ೦ಡಲ-ದ೦ಡಧರ ಅಲವಬೋಧರ ಮತ ಜಲಧಿ ವಿಹಾರ ಸುಲಲಿತ ಕರುಣಾಬ್ಧಿ ಜಗನ್ನಾಥವಿಠ್ಠಲನ ಒಲುಮೆಯ ಪಡೆದೀ ಇಳೆಯೊಳು ಮೆರೆದೆ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು