ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ

ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ

ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ ಶ್ರೀಕೃಷ್ಣ ಎಂದರೆ ದುರಿತ ನಿವಾರಣ ಎಚ್ಚತ್ತಿರು ಎಲೆ ಮನ ಮನವೆ ಎಚ್ಚತ್ತಿರೆಲೆ ಮನವೆ ಏಕೆ ಬೈಲನು ನೆನೆವೆ ಅಚ್ಯುತಾನಂತ ಗೋವಿಂದನೆಂಬ ನಾಮದಲಿ ಎಚ್ಚತ್ತಿರೆಲೆ ಮನವೆ ಏಕೆ ಬಯಲ ನೆನೆವೆ ಅಚ್ಯುತನೆ ಆದಿಕೇಶವನೆ ಅನಾಥಬಂಧೋ ಸಲಹೆಂದು ಅಚ್ಯುತನ ಪಾದವೆ ನಂಬು ಗತಿಯೆಂದು ಎಚ್ಚತ್ತಿರೆಲೆ ಮನವೆ ಅನಂತಾನಂತ ದೇವರ ದೇವ ರಂಗೇಶ ಅನಂತನೆಂದರೆ ಬಲುಭಯವಿನಾಶ ಅನಂತನೆಂದರೆ ತಡೆವ ಯಮಪಾಶ ಎಚ್ಚತ್ತಿರೆಲೆ ಮನವೆ ಗೋವಿಂದನೆಂದರೆ ಸಕಲತೀರ್ಥ ಸ್ನಾನ ಗೋವಿಂದನೆಂದರೆ ಸಕಲಮೂರ್ತಿ ಧ್ಯಾನ ಗೋವಿಂದನೆಂದರೆ ಪುರಂದರವಿಠಲ ಕೊಡುವ ಸಕಲಸುಜ್ಞಾನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು